ADVERTISEMENT

ಹೆಣ್ಣು ಮಗುವಿಗಾಗಿ ಓಟ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 19:30 IST
Last Updated 7 ಮಾರ್ಚ್ 2011, 19:30 IST

ದೇಶದ ಮುಂಚೂಣಿ ಮಹಿಳಾ ಆರೋಗ್ಯ ಮತ್ತು ಫಿಟ್‌ನೆಸ್ ಕೇಂದ್ರ ಕಾಂಟೋರ್ಸ್‌ ಇಂಟರ್‌ನ್ಯಾಷನಲ್, ಮಹಿಳಾ ದಿನಾಚರಣೆ ನಿಮಿತ್ತ ಮಾರ್ಚ್ 13ರಂದು ಬೆಳಿಗ್ಗೆ 8ರಿಂದ ಜಾಗೃತಿ ಓಟವನ್ನು ಆಯೋಜಿಸಿದೆ.ಭಾರತೀಯ ಮಹಿಳೆಯ ಸಬಲೀಕರಣ ಕ್ಕಾಗಿ ಎಲ್ಲ ವಯೋಮಾನದ ಮಹಿಳೆ ಮತ್ತು ಪುರುಷರಿಗಾಗಿ ಓಟ ಏರ್ಪಾಡಾಗಿದೆ.

ಸ್ತ್ರೀತನವನ್ನು ಸಂಭ್ರಮಿಸಲು ಹೆಣ್ಣುಮಗುವಿನ ಭವಿಷ್ಯಕ್ಕಾಗಿ ಓಡಬಹುದು, ನಡೆಯಬಹುದು. ನೋಂದಾವಣೆ ಪ್ರಕ್ರಿಯೆಯ ಮೂಲಕ ಸಂಗ್ರಹವಾದ ಮೊತ್ತದ ಒಂದು ಭಾಗ ಹುಡುಗಿಯರ ಶಿಕ್ಷಣದಲ್ಲಿ ತೊಡಗಿಸಿಕೊಂಡ ‘ಪರಿಕ್ರಮ ಫೌಂಡೇಶನ್’ ಮತ್ತು ‘ಆಶಾ’ಗೆ ಸೇರಲಿದೆ.

ಓಟದ ಖುಷಿ ಅನುಭವಿಸುತ್ತಲೇ ಹೆಣ್ಣುಮಗುವಿನ ಶಿಕ್ಷಣಕ್ಕೆ ನೆರವಾಗಲು ಕೈ ಜೋಡಿಸಬಹುದು ಎಂದು ಕಾಂಟೋರ್ಸ್‌ ಇಂಟರ್‌ನ್ಯಾಷನಲ್‌ನ ನಿರ್ದೇಶಕಿ ಚಂದ್ರಾ ಗೋಪಾಲನ್ ಹೇಳುತ್ತಾರೆ. ಮಹಿಳೆಯರಲ್ಲಂತೂ ಓಟದಿಂದ ಆಸ್ಟಿಯೊಪೊರೋಸಿಸ್ ಮತ್ತು ಮುಟ್ಟಿನ ಪೂರ್ವದ ಸಿಂಡ್ರೋಮ್)ನ ಅಪಾಯಗಳು ಕಡಿಮೆಯಾಗುತ್ತವೆ! ಓಡುವುದರೊಂದಿಗೆ ಆರೋಗ್ಯದ ಲಾಭಗಳೂ ಇವೆ.ರನ್ನರ್ಸ್ ಫಾರ್ ಲೈಫ್, ಕ್ಲರ್ಕ್ಸ್ ಎಕ್ಸೋಟಿಕಾ, ರಿಲಯನ್ಸ್ ಟ್ರೆಂಡ್ಸ್‌ಗಳು ಕೂಡ ಈ ಓಟದಲ್ಲಿ ಕೈಜೋಡಿಸಿವೆ.
ಸ್ಥಳ: ಕ್ಲಾರ್ಕ್ಸ್ ಎಕ್ಸೋಟಿಕಾ, ದೇವನಹಳ್ಳಿ ಏರ್‌ಪೋರ್ಟ್ ಸಮೀಪ. ನೋಂದಣಿಗೆ: www.contoursinternational.com/ ಅಥವಾ ರಿಲಯನ್ಸ್ ಟ್ರೆಂಡ್ಸ್ ಮಳಿಗೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.