`ಮನಸ್ಸು ಎಂಬುವುದು ಏನನ್ನಾದರೂ ತುಂಬಬಲ್ಲ ಪಾತ್ರೆಯಲ್ಲ. ಬದಲಿಗೆ ಜ್ಞಾನದ ಬೆಳಕನ್ನು ಪ್ರಜ್ವಲಿಸುವ ಒಂದು ಹಣತೆ' ಎಂಬ ಮಾತಿನಲ್ಲಿ ನಂಬಿಕೆ ಇಟ್ಟ ಬುದ್ಧಿಜೀವಿಗಳನ್ನೊಳಗೊಂಡ ಗೀತಾಂಜಲಿ ಶಿಕ್ಷಣ ಸಂಸ್ಥೆ, ಗುಣಮಟ್ಟದ ಶಿಕ್ಷಣ, ಶಿಸ್ತು ಹಾಗೂ ವಿದ್ಯಾರ್ಥಿಯ ವಿದ್ಯಾಭ್ಯಾಸ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಗೀತಾಂಜಲಿ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ಸೇರಿದಂತೆ ಮಾಂಟೆಸರಿಯಿಂದ ಸಿಬಿಎಸ್‌ಇ, ಐಜಿಸಿಎಸ್‌ಇ ವಿದ್ಯಾಭ್ಯಾಸ ನೀಡುತ್ತಿರುವ ಗೀತಾಂಜಲಿ ವಿದ್ಯಾಲಯ, ಕಳೆದ 15 ವರ್ಷಗಳಲ್ಲಿ ತನ್ನ ಶಿಕ್ಷಣದಲ್ಲಿನ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿರುವುದಲ್ಲದೇ ಅಂತರರಾಷ್ಟ್ರೀಯ ಮಟ್ಟಕ್ಕೆ ತನ್ನ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದೆ. ಇದರಿಂದಾಗಿ ದೇಶ ಹಾಗೂ ವಿದೇಶಗಳಲ್ಲಿ ತನ್ನ ಕೀರ್ತಿ ಹೆಚ್ಚಿಸಿಕೊಂಡಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 25 ನಿಮಿಷಗಳ ದೂರದಲ್ಲಿರುವ ಈ ಶಿಕ್ಷಣ ಸಂಸ್ಥೆಯು ಜಾಗತಿಮಟ್ಟದಲ್ಲಿ ಮಾನ್ಯತೆ ಪಡೆದಿರುವ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಶಿಕ್ಷಣದ ಜತೆಗೆ ಕ್ರೀಡೆ, ಯೋಗಾ, ಧ್ಯಾನ, ಪ್ರಕೃತಿಯಲ್ಲಿ ಮುಂಜಾನೆಯ ವಿಹಾರ, ಟ್ರಕ್ಕಿಂಗ್, ಡ್ರಿಲ್ ಹಾಗೂ ಕದನಕಲೆ ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾನಸಿಕ ವಿಕಾಸಕ್ಕೆ ಒತ್ತು ನೀಡಲಾಗುತ್ತಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ನಾಯಕತ್ವ ಕಾರ್ಯಕ್ರಮ, ಪ್ರವಾಸ, ಅಂತರರಾಷ್ಟ್ರೀಯ ಸಭೆಗಳು, ಕೌಶಲ್ಯ ಕಾರ್ಯಾಗಾರ ಇತ್ಯಾದಿಗಳನ್ನೂ ಆಯೋಜಿಸಲಾಗುತ್ತಿದೆ. ಬೃಹತ್ ಕ್ಯಾಂಪಸ್‌ನಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಿದ್ಯಾರ್ಥಿ ನಿಲಯಗಳು, ಕ್ರೀಡೆಗೆ ಸಿಂಥೆಟಿಕ್ ಕೋರ್ಟ್, ವೈ ಫೈ ಕ್ಯಾಂಪಸ್, ಈಜುಕೊಳ, ಧ್ವನಿ ಹಾಗೂ ದೃಶ್ಯ ಪ್ರದರ್ಶನ ಸಭಾಂಗಣ, ಸರ್ವರ್ ಆಧಾರಿತ ಕಂಪ್ಯೂಟರ್ ಪ್ರಯೋಗಾಲಯದ ಜತೆಗೆ ಶುದ್ಧ ಹಾಗೂ ರುಚಿಕಟ್ಟಾದ ಅಡುಗೆ ನೀಡುವ ಕ್ಯಾಂಟೀನ್ ವ್ಯವಸ್ಥೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.