ಇನ್‌ಫೆಂಟ್ರಿ ರಸ್ತೆಯ ಸಫೀನಾ ಪ್ಲಾಜಾದಲ್ಲಿ ಇರುವ ಸಿಟಿಜನ್ ವಾಚಸ್ ಮಳಿಗೆ ಕಳೆಕಳೆಯಾಗಿತ್ತು. ಹೊಸ ಹೊಸ ವಿನ್ಯಾಸದ ಕೈಗಡಿಯಾರಗಳನ್ನು ತುಂಬಿಕೊಂಡು ನಳನಳಿಸುತ್ತಿತ್ತು.
ಅದನ್ನು ಉದ್ಘಾಟಿಸಲು ಜಪಾನ್‌ನಿಂದ ಸಿಟಿಜನ್ ವಾಚಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಟ್ಸುಕೆ ಟೋಕುರಾ ಬೆಂಗಳೂರಿಗೆ ಆಗಮಿಸಿದ್ದರು.
ಹೊಸ ಅವತಾರದಲ್ಲಿ ತಲೆ ಎತ್ತಿದ್ದ ಮಳಿಗೆಯನ್ನು ಉದ್ಘಾಟಿಸಿದ ಅವರು ತಮ್ಮ ಸಂಸ್ಥೆಯಿಂದ ತಯಾರಿಸಿರುವ ವಿನೂತನ ಕೈಗಡಿಯಾರಗಳನ್ನು ಪರಿಚಯಿಸಿದರು. ಎಕೋ-ಡ್ರೈವ್ ಸೂಪರ್ ಟೈಟಾನಿಯಮ್ ಎಂಬ ಹೆಸರಿನ ತಮ್ಮ ಸಂಸ್ಥೆಯ ಪ್ರಮುಖ ಬ್ರ್ಯಾಂಡನ್ನು ಬಹುವಾಗಿ ಮೆಚ್ಚಿ ಮಾತನಾಡಿದರು.
ಪ್ರಮುಖವಾಗಿ ಪ್ರೆಸ್ಟೀಜ್ ಕ್ರೊನೊಗ್ರಾಫ್ ಹೆಸರಿನ ನೂತನ ಬ್ರ್ಯಾಂಡ್ ಮಾರುಕಟ್ಟೆಗೆ ಬಿಡುಗಡೆಯಾಯಿತು. ಅದರಲ್ಲಿ ಕಟಿಂಗ್ ಎಡ್ಜ್ ಮತ್ತು ಅತ್ಯಾಧುನಿಕ ಮಲ್ಟಿಲೇಯರ್ ಕೋಟಿಂಗ್ ತಂತ್ರಜ್ಞಾನ ಅಳವಡಿಕೆಯಾಗಿದೆ. ಜೊತೆಗೆ ಅತ್ಯುತ್ತಮ ಗುಣಮಟ್ಟದ ಹೈಟೆಕ್ ಕಲರ್ ಎಫೆಕ್ಟ್ ಬಳಕೆಯಾಗಿದೆ.
ಗ್ರಾಹಕರನ್ನುಆಕರ್ಷಿಸಲು ಸಾಕಷ್ಟು ಹೊಸ ವಿನ್ಯಾಸ ಮತ್ತು ತಾಂತ್ರಿಕತೆ ಬಳಸಿದ ಕೈಗಡಿಯಾರಗಳನ್ನು ಸಿಟಿಜನ್ ಹೊರತಂದಿದೆ. ಕಪ್ಪು, ಬಿಳಿ, ಕೆಂಪು, ನೀಲಿ ಮತ್ತು ತಿಳಿ ಹಳದಿ ಬಣ್ಣದ ವಾಚ್‌ಗಳು ಮಳಿಗೆಯ ಅಂದವನ್ನು ಹೆಚ್ಚಿಸಿವೆ.
ಕಟ್ಸುಕೆ ಟೋಕುರಾ ಮಾತನಾಡಿ, `ಇಂದು ಕೈಗಡಿಯಾರಗಳು ಕೇವಲ ಸಮಯ ನೋಡಲು ಮಾತ್ರ ಬಳಕೆಯಾಗುತ್ತಿಲ್ಲ. ಅತ್ಯಾಧುನಿಕ ಫ್ಯಾಷನ್ ಎನಿಸಿಕೊಂಡಿವೆ. ಭಾರತದ ಮಾರುಕಟ್ಟೆಗೆ ತಕ್ಕಂತೆ ಮತ್ತು ಯುವಜನರ ಮನಸ್ಸನ್ನುಆಧರಿಸಿ ಹೊಸ ಹೊಸ ಬ್ರ್ಯಾಂಡ್‌ಗಳನ್ನು ತಯಾರಿಸುತ್ತಿದ್ದೇವೆ.
ಇನ್ನು ಐದು ವರ್ಷಗಳಲ್ಲಿ ಸಿಟಿಜನ್ ಮಳಿಗೆಗಳನ್ನು ಭಾರತದ ಪ್ರಮುಖ ನಗರಗಳಲ್ಲಷ್ಟೇ ಅಲ್ಲದೆ ಎರಡನೇ ದರ್ಜೆಯ ನಗರಗಳಿಗೂ ವಿಸ್ತರಿಸುವ ಯೋಜನೆ ಇದೆ. ಮುಂದಿನ ಐದು ವರ್ಷಗಳಲ್ಲಿ ಸಂಸ್ಥೆ 4000 ಕೋಟಿ ರೂಪಾಯಿ ಲಾಭ ಪಡೆಯುವ ನಿರೀಕ್ಷೆ ಇದೆ~ ಎಂದರು.
ಅಲ್ಲಿ ಹಾಜರಿದ್ದ ಸಿಟಿಜನ್ ಸಂಸ್ಥೆಯ ಭಾರತ ಶಾಖೆಯ ಪ್ರಧಾನ ವ್ಯವಸ್ಥಾಪಕ ಟಕೇಶಿ ಒಕಾಡಾ ಮಾತನಾಡಿ, ತಮ್ಮ ಸಂಸ್ಥೆಯ ಕೈಗಡಿಯಾರಗಳು ತಂತ್ರಜ್ಞಾನ ಮತ್ತು ಸೌಂದರ್ಯದ ಸಮ್ಮಿಶ್ರಣವಾಗಿವೆ ಎಂದು ಮೆಚ್ಚಿ ನುಡಿದರು.
ಮಳಿಗೆಯ ತುಂಬಾ ಸೂಪರ್ ಟಟಾನಿಯಂ, ರೇಡಿಯೋ ಕಂಟ್ರೋಲ್ಡ್ ವಾಚ್, ಎಕೋ ಡ್ರೈವ್ ಸೇರಿದಂತೆ ಸಾಕಷ್ಟು ನೂತನ ವಿನ್ಯಾಸದ ಕೈಗಡಿಯಾರಗಳು ಕಾಲಕ್ಕೆ ತಕ್ಕ ವಿನ್ಯಾಸದಲ್ಲಿ ಕಂಗೊಳಿಸುತ್ತಿದ್ದವು. ಅಂದು ಬಿಡುಗಡೆಯಾದ ಹೊಸ ಬ್ರ್ಯಾಂಡ್‌ಗಳ ಬೆಲೆ 19,500 ರೂಪಾಯಿಯಿಂದ ಆರಂಭವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.