ADVERTISEMENT

ಹೋಳಿ ಕೇರ್

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ನಿಮಗಿಷ್ಟ ಬಂದಂತೆ ಬಣ್ಣಗಳನ್ನು ಎರಚಿಕೊಂಡು ಹೋಳಿ ಆಚರಿಸಿದ ಬಳಿಕ ಉಂಟಾಗುವ ಪರಿಣಾಮಗಳ ಬಗೆಗೆ  ತಲೆಕೆಡಿಸಿಕೊಳ್ಳಬೇಡಿ. ಅದಕ್ಕೆ ಬೇಕಾದ ಉಪಾಯ ನಮ್ಮಲ್ಲಿದೆ ಎನ್ನುತ್ತಿದೆ ಕೇಶ ಮತ್ತು ಚರ್ಮ ರಕ್ಷಣೆಯ ಸೌಂದರ್ಯವರ್ಧಕಗಳ ಬ್ರಾಂಡ್ ಮೋದಿಕೇರ್.

ಇದಕ್ಕಾಗಿಯೇ ಮೋದಿಕೇರ್‌ನಲ್ಲಿ ವಿಶೇಷ ಹೋಳಿ ಕಲೆಕ್ಷನ್‌ಗಳಿವೆ. ನಿಸರ್ಗ ಸಹಜವಾದ ಕೊಬ್ಬರಿ ಎಣ್ಣೆ,  ಕಂಡಿಷನರ್‌ಗಳನ್ನು ಒಳಗೊಂಡ ಸಲೂನ್ ಕೇಶ ತೈಲ, ಎಸೆನ್ಷಿಯಲ್ 20 ಡೀಪ್ ಕ್ಲೆನ್ಸಿಂಗ್‌ಗಳನ್ನು ಇದು ಒಳಗೊಂಡಿದೆ. ಬಣ್ಣಗಳಿಂದ ಚರ್ಮಕ್ಕೆ ಆಗಬಹುದಾದ ಹಾನಿ ತಡೆಗಟ್ಟುವುದರ ಜತೆ ಬಣ್ಣಗಳನ್ನು ತೊಲಗಿಸಲು ಇವು ಸಹಕಾರಿ.

‘ಡಜ್ ಆಲ್ ಅಡ್ವಾನ್ಸ್‌ಡ್ ಮಲ್ಟಿಪರ್ಪಸ್ ಕ್ಲೀನರ್’ ಎಲ್ಲ ವಿಧದ ಬಣ್ಣಗಳನ್ನು ತೊಲಗಿಸಲು ಆಲ್  ರೌಂಡರ್‌ನಂತೆ ಕೆಲಸ ಮಾಡುತ್ತದೆ.
ಹೋಳಿಯಿಂದ ಬಟ್ಟೆಗಳಿಗೆ ಅಂಟಿಕೊಂಡಿರುವ ಬಣ್ಣ ಸ್ವಚ್ಛ ಗೊಳಿಸಲು ಲಾಂಡ್ರಿ ಕೇರ್ ಸಿಸ್ಟಂ ಹೊರತಂದಿದೆ.
ಜುರಿ ಭೋಜನ
ಹೋಳಿ ನಿಮಿತ್ತ ಭಾನುವಾರ ಬೆಳಿಗ್ಗೆ 11ರಿಂದ ರಂಗು ರಂಗಿನ ಬಣ್ಣಗಳ ಎರಚಾಟದ ಸಂಭ್ರಮದ ಜೊತೆಗೆ ನೃತ್ಯ ಹಾಗೂ ಭೂರಿ ಭೋಜನ ಸವಿಯುವ ವಿಶಿಷ್ಟ ಅವಕಾಶ ಕಲ್ಪಿಸಿದೆ ವೈಟ್‌ಫೀಲ್ಡ್‌ನ ಜುರಿ ಹೋಟೆಲ್. ಮಥುರಾದ ಹೋಳಿ ಸಂಭ್ರಮ ಉದ್ಯಾನ ನಗರಿಯಲ್ಲಿ ಮರುಕಳಿಸುವಂತೆ ಡೋಲು, ಪಿಚಕಾರಿ ಸಂಭ್ರಮ ಹಾಗೂ ನಗರದ ಪ್ರತಿಷ್ಠಿತ ಡಿಸ್ಕೋ ಜಾಕಿಗಳ ಸಂಗೀತ ಮನ ತಣಿಸಲಿದೆ.

ಬ್ಯಾಡ್ ಆ್ಯಸ್ ಸೇಲ್
ವೈಟ್‌ಫೀಲ್ಡ್ ರಸ್ತೆಯ ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ಶನಿವಾರ ‘ದಿ ಬ್ಯಾಡ್ ಆ್ಯಸ್ ಸೇಲ್’. ಇದರಲ್ಲಿ ಎಲ್ಲಾ ವಿಧದ ಉಡುಪುಗಳ ಮೇಲೆ ಶೇ 40 ರಿಯಾಯ್ತಿ, ಟೀಸ್, ಹೂಡೀಸ್‌ಗಳು 1499 ರೂಗಳಿಗೆ ದೊರೆಯಲಿವೆ.             
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.