ADVERTISEMENT

ಹ್ಯೂ ವರ್ಣವೈವಿಧ್ಯದ ವಸ್ತ್ರ ಮಳಿಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST
ಹ್ಯೂ ವರ್ಣವೈವಿಧ್ಯದ ವಸ್ತ್ರ ಮಳಿಗೆ
ಹ್ಯೂ ವರ್ಣವೈವಿಧ್ಯದ ವಸ್ತ್ರ ಮಳಿಗೆ   

ಹ್ಯೂ ಆರಂಭಿಸಲು ಮುಂಬೈ ನಂತರ ಬೆಂಗಳೂರನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ?
ಮುಂಬೈನಲ್ಲಿ ಹ್ಯೂ ಆರಂಭಿಸಿದಾಗ ಅಮೋಘವಾದ ಪ್ರತಿಕ್ರಿಯೆ ದೊರೆಯಿತು. ದಕ್ಷಿಣದಲ್ಲಿ ಆರಂಭಿಸಬೇಕು ಎಂಬುದೊಂದು ಆಸೆ ಇತ್ತು. ಆದರೆ ಹೈದರಾಬಾದ್, ಚೆನ್ನೈನಲ್ಲಿ ಈ ಬಗೆಯ ಮಳಿಗೆಗಳಿವೆ. ಬೆಂಗಳೂರಿಗೆ ಪರಿಕಲ್ಪನೆ ಹೊಸತು. ಸ್ಪರ್ಧೆಯೇ ಇಲ್ಲವಲ್ಲ, ಅದಕ್ಕೇ ಬೆಂಗಳೂರನ್ನು ಆಯ್ಕೆ ಮಾಡಿದೆ.

ಪರಿಕಲ್ಪನೆ ಹೊಸತು ಎಂದರೆ?
ಇಲ್ಲಿ ಕೇವಲ ಡಿಸೈನರ್‌ವೇರ್‌ಗಳು ದೊರೆಯಲಿವೆ. ಬಹುತೇಕ ಭಾರತೀಯ ಡಿಸೈನರ್‌ಗಳ ಸಂಗ್ರಹಗಳು ಒಂದೇ ಸೂರಿನಡಿ ದೊರೆಯುತ್ತವೆ. ಎಲ್ಲ ಸಂಗ್ರಹಗಳನ್ನೂ ಬೆಂಗಳೂರಿನ ಮಳಿಗೆಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಮುಂಬೈನಲ್ಲಿ ಉಳಿದ ದಾಸ್ತಾನು ಎಂಬ ಸಂಶಯ ಬೇಡವೇ ಬೇಡ.
 
ಯಾವ ವಸ್ತ್ರವಿನ್ಯಾಸಕರ ಸಂಗ್ರಹ ಮಳಿಗೆಯಲ್ಲಿವೆ?
ಕೃಷ್ಣಾ ಮೆಹ್ತಾ, ಗೋಪಿ ವೈದ್, ಮನೀಷ್ ಅರೋರಾ, ವಿಕ್ರಮ್ ಫಡ್ನಿಸ್, ಅನುರಾಧಾ ವಕೀಲ್, ರಾಕಿ ಎಸ್, ಮೋನಾ ಪಾಲ್, ನಚಿಕೇತ್ ಬಾರ್ವೆ, ಮಸಬಾ, ಪೂಜಾ ಕಪೂರ್, ನಿಕಿ ಮಹಾಜನ್, ರಾಜದೀಪ್ ರನಾವತ್ ಇನ್ನೂ ಕೆಲವು ಹೊಸ ವಸ್ತ್ರ ವಿನ್ಯಾಸಕರನ್ನೂ ಬೆಂಗಳೂರಿಗೆ ಪರಿಚಯಿಸಲಾಗುತ್ತಿದೆ.

ಡಿಸೈನರ್ ಮಳಿಗೆಯೆಂದರೆ ಕೇವಲ ಉಳ್ಳವರಿಗೆ ಮಾತ್ರ ಎಂದರ್ಥವೇ?
ಇಲ್ಲ, ಇದೇ ಭ್ರಮೆಯನ್ನು ಹೋಗಲಾಡಿಸಬೇಕಿದೆ. ಡಿಸೈನರ್ ವೇರ್ ಎಂದೊಡನೆ ಹೆಚ್ಚಾಗಿ 20 ಸಾವಿರ ರೂಪಾಯಿ ಮೇಲ್ಪಟ್ಟು ಎಂದೇ ಯೋಚಿಸಲಾಗುತ್ತದೆ. ಆದರೆ ನಮ್ಮಲ್ಲಿ 10 ಸಾವಿರ ರೂಪಾಯಿಗಳಿಂದ ಸೀರೆ ಸಂಗ್ರಹ ಆರಂಭವಾಗುತ್ತವೆ. 8 ಲಕ್ಷ ರೂಪಾಯಿ ಮೌಲ್ಯದ ವಸ್ತ್ರಗಳೂ ನಮ್ಮಲ್ಲಿವೆ.

ಬೆಲೆ ಕಡಿಮೆಯೆಂದರೆ ಗುಣಮಟ್ಟ?
ಗುಣಮಟ್ಟದಲ್ಲಿ ವ್ಯತ್ಯಾಸ ಮಾಡುವುದಿಲ್ಲ. ಒಂದು ಸೀರೆಯ ವಿನ್ಯಾಸದಲ್ಲಿ ಕೊರತೆಯಾಗದಂತೆ, ಕಸೂತಿ, ಕುಸುರಿ ಕೆಲಸವನ್ನು ಕಡಿಮೆ ಮಾಡಲಾಗುತ್ತದೆ. ವೈಭವಕ್ಕೇನೂ ಕೊರತೆ ಇರುವುದಿಲ್ಲ.

ಬೆಂಗಳೂರಿಗರ ಪ್ರತಿಕ್ರಿಯೆ ಹೇಗಿದೆ?
ಜನವರಿಯಲ್ಲಿ ಈ ಮಳಿಗೆ ಆರಂಭವಾಗಿದೆ. ಯಾವುದೇ ಪ್ರಚಾರಗಳಿಲ್ಲದೇ ಹಲವು ಕಾಯಂ ಗ್ರಾಹಕರನ್ನು ಗಳಿಸಿಕೊಂಡಿದೆ. ಆದರೆ ಬೆಂಗಳೂರಿಗರು ಬೆಲೆಪಟ್ಟಿ ವಿಷಯದಲ್ಲಿ ಲೆಕ್ಕಾಚಾರ ಮಾಡುತ್ತಾರೆ. ಖರೀದಿಸುವ ಮುನ್ನ ಅತಿ ಹಿಂದೆಮುಂದೆ ವಿಚಾರಿಸುತ್ತಾರೆ. ಮುಂಬೈಯಂತೆ ಕಂಡಿದ್ದೆಲ್ಲ ಕೊಳ್ಳುವವರಲ್ಲ.

ಬೆಂಗಳೂರಿಗರು ಹೆಚ್ಚಾಗಿ ಏನನ್ನು ಕೊಳ್ಳುತ್ತಾರೆ?
ಟ್ಯುನಿಕ್ಸ್ ಹಾಗೂ ಚೂಡಿದಾರ್‌ನಂಥ ಉಡುಗೆಗಳು ಹೆಚ್ಚು ಮಾರಾಟವಾಗುತ್ತವೆ. ಗ್ರಾಹಕರು ಚರ್ಚಿಸುವುದು ಒಂದೇ ವಿಷಯ.. ಕೊಟ್ಟ ಕಾಸಿಗೆ ನ್ಯಾಯ ಸಲ್ಲಿಸುವಷ್ಟು ಸಲ ಧರಿಸುತ್ತೇವೆಯೇ? ಎಂದು... ಈ ಜಾಣ್ಮೆ ಬೇರೆಲ್ಲೂ ಕಂಡು ಬರುವುದಿಲ್ಲ.

ಹ್ಯೂ.. ಹೆಸರು ಉಚ್ಚರಿಸುವುದು ಕಷ್ಟವಲ್ಲವೇ?
ಆದರೆ ಅರ್ಥ... ವರ್ಣವಿನ್ಯಾಸ, ವೈವಿಧ್ಯ, ಬೆಳಕು ಎಲ್ಲವನ್ನೂ ಒಳಗೊಂಡ ಈ ಹೆಸರು ಮಳಿಗೆಯ ವಿಶೇಷಗಳನ್ನು ಒಳಗೊಂಡಿದೆ. 5000 ಚದರ್‌ಅಡಿ ವಿಸ್ತೀರ್ಣದ ಈ ಮಳಿಗೆಯಲ್ಲಿ ಕೆಲವೇ ವಸ್ತ್ರಗಳಿವೆ. ಗ್ರಾಹಕರು ಅವನ್ನು ನಿಧಾನವಾಗಿ ಆಯ್ಕೆ ಮಾಡಿಕೊಂಡು ಒಮ್ಮೆ ಧರಿಸಿ ಪರೀಕ್ಷಿಸಿ ಕೊಳ್ಳಲು ಬೇಕಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿದೆ.

ಹ್ಯೂ ವಿಳಾಸ: 12ನೇ ಮೇನ್, 4ನೇ ಅಡ್ಡ ರಸ್ತೆ, ಇಂದಿರಾನಗರ. ಸಾಗರ್ ಕ್ಲಿನಿಕ್ ಹಿಂಭಾಗ. 25207382 / 9632614687
www.huefashions.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.