ADVERTISEMENT

‘ದಿ ಸೆಕೆಂಡ್‌ ಮೊಮೆಂಟ್’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST
ನಳಪಾದ್ಸ್ ಹೋಟೆಲ್‌ ಇಂಟರ್‌ನ್ಯಾಷನಲ್‌ನ ಕ್ರೆಸೆಂಟ್ ಗ್ಯಾಲರಿಯಲ್ಲಿ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ‘ದಿ ಸೆಕೆಂಡ್ ಮೊಮೆಂಟ್’ ಆರಂಭವಾಗಿದೆ. ಹಸ್ತ ಗ್ಯಾಲರಿ ಪ್ರಾಜೆಕ್ಟ್‌ನ ನಾಲ್ಕನೇ ಪ್ರದರ್ಶನ ಇದಾಗಿದ್ದು, ಸೆ.30ರವರೆಗೆ ಮುಂದುವರಿಯಲಿದೆ.
ನಳಪಾದ್ಸ್ ಹೋಟೆಲ್‌ ಇಂಟರ್‌ನ್ಯಾಷನಲ್‌ನ ಕ್ರೆಸೆಂಟ್ ಗ್ಯಾಲರಿಯಲ್ಲಿ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ‘ದಿ ಸೆಕೆಂಡ್ ಮೊಮೆಂಟ್’ ಆರಂಭವಾಗಿದೆ. ಹಸ್ತ ಗ್ಯಾಲರಿ ಪ್ರಾಜೆಕ್ಟ್‌ನ ನಾಲ್ಕನೇ ಪ್ರದರ್ಶನ ಇದಾಗಿದ್ದು, ಸೆ.30ರವರೆಗೆ ಮುಂದುವರಿಯಲಿದೆ.   

ನಳಪಾದ್ಸ್ ಹೋಟೆಲ್‌ ಇಂಟರ್‌ನ್ಯಾಷನಲ್‌ನ ಕ್ರೆಸೆಂಟ್ ಗ್ಯಾಲರಿಯಲ್ಲಿ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ‘ದಿ ಸೆಕೆಂಡ್ ಮೊಮೆಂಟ್’ ಆರಂಭವಾಗಿದೆ. ಹಸ್ತ ಗ್ಯಾಲರಿ ಪ್ರಾಜೆಕ್ಟ್‌ನ ನಾಲ್ಕನೇ ಪ್ರದರ್ಶನ ಇದಾಗಿದ್ದು, ಸೆ.30ರವರೆಗೆ ಮುಂದುವರಿಯಲಿದೆ.

ಈ ಬಾರಿಯ ಪ್ರದರ್ಶನದಲ್ಲಿ ಸಂಜಿತ್‌ ಸೀತಾರಾಮ್‌, ಮಧುಸೂದನ್‌, ಎಂ.ಅರವಿಂದ್‌, ಅಕ್ಷಯ್‌ ಗುರುರಾಜ್‌, ಸೂರ್ಯ ಮುಕುಂದರಾಜ್‌, ಗೌತಮ್‌ ಬಾಳಿಗಾ, ಸುಪ್ರಿಯಾ ಸುಜಿತ್‌, ನಿವೇದಿತಾ ವಾರಿಯರ್‌ ಮತ್ತು ಸೋನು ಸಹದೇವ್‌ ಅವರ ಕಣ್ಮನ ತುಂಬುವ  ಛಾಯಾಚಿತ್ರಗಳಿವೆ.

ಇವರೆಲ್ಲರೂ ವಿಭಿನ್ನ ವೃತ್ತಿಗಳಲ್ಲಿರುವವರು. ಕೇರಳದ ಸಂಜಿತ್‌ ಸೀತಾರಾಂ ವೃತ್ತಿಯಲ್ಲಿ ವಾಸ್ತುಶಿಲ್ಪಿ, ಒಳಾಂಗಣ ವಿನ್ಯಾಸಕಾರ. ಮೋಡಗಳೆಂದರೆ ಅವರಿಗೆ ಇಷ್ಟ. ಹಾಗಾಗಿ ಮೋಡಗಳೆಡೆಗೆ ಅವರ ಕ್ಯಾಮರಾ ದೃಷ್ಟಿ ನೆಟ್ಟಿರುತ್ತದೆ. ‘ಮೋಡಗಳು ದೇವರ ಕಲೆ’ ಎಂಬುದು ಅವರ ಅನಿಸಿಕೆ.

ಅನಿಮೇಷನ್‌ ವೃತ್ತಿಯಲ್ಲಿರುವ ಎಂ.ಅರವಿಂದ್‌ಗೆ ಫೋಟೊಗ್ರಫಿ ಹವ್ಯಾಸ. ಮತ್ತೆಂದೂ ಸಿಗದ ದೃಶ್ಯವನ್ನು ಸೆರೆ ಹಿಡಿಯುವುದರಲ್ಲಿ ಆಸಕ್ತಿ ಇರುವ ಅರವಿಂದ್‌ ‘ಫೋಟೊ, ಕಣ್ಣಿನಲ್ಲೇ ಇರುತ್ತದೆ. ಕ್ಯಾಮರಾ ಒಂದು ಸಾಧನವಷ್ಟೇ’ ಎನ್ನುತ್ತಾರೆ.

ಅಕ್ಷಯ್‌ ಗುರುರಾಜ್‌ ಇಂಗ್ಲೆಂಡ್‌ನಲ್ಲಿ ಮಾಧ್ಯಮ ವಿಷಯದಲ್ಲಿ ಪದವಿ ಪಡೆದವರು. ‘ನಾವು ಎಂತಹ ವ್ಯಕ್ತಿತ್ವದವರು ಎಂಬುದನ್ನು ನಮ್ಮ ಫೋಟೊಗಳು ಹೇಳುತ್ತವೆ. ಸಾವಿರ ಪದಗಳಲ್ಲಿ ಹೇಳಲಾಗದ್ದನ್ನು ಒಂದು ಫೋಟೊ ಹೇಳಬಲ್ಲದು ಎಂಬ ಮಾತಿದೆ. ಆದರೆ ಅಷ್ಟೇ ಅಲ್ಲ, ಲೆಕ್ಕವಿಲ್ಲದಷ್ಟು ಕಥೆಗಳನ್ನು ಒಂದು ಫೋಟೊ ಹೇಳಬಲ್ಲದು’ ಎಂಬುದು ಅವರು ನೀಡುವ ವಿವರಣೆ.

ಸೂರ್ಯ ಮುಕುಂದರಾಜ್‌ ವೃತ್ತಿಯಲ್ಲಿ ನ್ಯಾಯವಾದಿ. ಕ್ಯಾಮೆರಾ ಹಿಡಿದು ಚಿತ್ರಗಳಿಗಾಗಿ ಹುಡುಕಾಡುವುದು ಇವರ ಹವ್ಯಾಸ. ಪೂರ್ಣಚಂದ್ರ ತೇಜಸ್ವಿಯವರ ಬರಹ ಮತ್ತು ಛಾಯಾಚಿತ್ರಗಳಿಂದ ಸ್ಫೂರ್ತಿ ಪಡೆದವರು. ‘ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿರುವ ಜ್ಞಾನಭಾರತಿಯಲ್ಲಿರುವ ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿರುವ ನಲುವತ್ತಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳ ಚಲನವಲನವನ್ನು ಗಮನಿಸುತ್ತಾ ಛಾಯಾಗ್ರಹಣಕ್ಕೆ ಇಳಿದವನು ನಾನು’ ಎಂದು ಅವರು ಹೆಮ್ಮೆಪಡುತ್ತಾರೆ.

ಗೌತಮ್‌ ಬಾಳಿಗಾ ವೃತ್ತಿಯಲ್ಲಿ ಎಂಜಿನಿಯರ್‌. ಸ್ಮರಣೀಯ ಕ್ಷಣಗಳನ್ನು ಚಿತ್ರವಾಗಿಸುವುದರಲ್ಲಿ ಇವರಿಗೆ ಆಸಕ್ತಿ. ಕೇರಳದ ಸುಪ್ರಿಯಾ ಸುಜಿತ್‌ ಬರೋಡದಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಅವರು ಹವ್ಯಾಸಕ್ಕಾಗಿ ಕ್ಯಾಮೆರಾ ಹಿಡಿದವರು. ಆದರೆ ಈಗ ಅದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ.

ದೆಹಲಿಯ ಸೋನು ಸಹದೇವ್‌ ಚಿತ್ರಕಲಾ ಪರಿಷತ್ತಿನಲ್ಲಿ ಚಿತ್ರಕಲೆಯಲ್ಲಿ ಪದವಿ ಪಡೆದವರು. ಸುತ್ತಾಡುವುದು ಮತ್ತು ವನ್ಯಜೀವಿ ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ಪ್ರಾಣಿಗಳ ಚಲನವಲನವನ್ನು ಸೆರೆಹಿಡಿಯುವುದೂ ಇಷ್ಟವಂತೆ.

ಬೇರೆಬೇರೆ ವೃತ್ತಿಯಲ್ಲಿರುವವರು ಹವ್ಯಾಸಕ್ಕಾಗಿ ಕ್ಯಾಮೆರಾ ಹಿಡಿಯುವುದು ಹೊಸದೇನಲ್ಲ. ಆದರೆ ಅದನ್ನೇ ಗಂಭೀರವಾಗಿ ಪರಿಗಣಿಸುವವರು ಕಡಿಮೆ. ಇತ್ತೀಚೆಗೆ ವೃತ್ತಿಯ ಜೊತೆಗೆ ಛಾಯಾಗ್ರಹಣದಲ್ಲಿ ತೊಡಗಿಕೊಳ್ಳುವವರ ದೊಡ್ಡ ಬಳಗವೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.