ADVERTISEMENT

10ಕೆ ಮ್ಯಾರಥಾನ್‌ನಲ್ಲಿ 3.70 ಕೋಟಿ ದೇಣಿಗೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ಪ್ರತಿವರ್ಷದಂತೆ ನಡೆಸಿದ `ವರ್ಲ್ಡ್ 10ಕೆ ಬೆಂಗಳೂರು' ಮ್ಯಾರಥಾನ್‌ನಲ್ಲಿ ಈ ಬಾರಿ ದೇಣಿಗೆ ರೂಪದಲ್ಲಿ ರೂ. 3.70 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಈ ಮೊತ್ತ ರೂ. 65 ಲಕ್ಷ ಅಧಿಕವಾಗಿದೆ ಎಂದು ಬೆಂಗಳೂರು ಕೇರ್ಸ್‌ನ ಸಂಸ್ಥಾಪಕ ಅಧ್ಯಕ್ಷ ಮುರೆ ಕುಶ್ವಾ ಗುರುವಾರ ಪ್ರಕಟಿಸಿದರು.

ಎಕೆಕೆ-ಅಂಗ ಕಾರುಣ್ಯ ಕೇಂದ್ರದ ಬೆಂಬಲದೊಂದಿಗೆ ಜಿ.ಮನೋಹರ್ ಅತಿ ಹೆಚ್ಚು (12.99 ಲಕ್ಷ) ದೇಣಿಗೆ ಸಂಗ್ರಹಿಸಿ `ಕೇರ್ ಚಾಂಪಿಯನ್', ಪೀಪಲ್ ವಿತ್ ಡಿಸೆಬೆಲಿಟಿ ಸಹಕಾರದೊಂದಿಗೆ ರೂ. 18.28 ಲಕ್ಷ ಸಂಗ್ರಹಿಸಿದ ದೇವಿಕಾ ಎಂ.ಎಲ್. `ಮಹಿಳಾ ಕೇರ್ ಚಾಂಪಿಯನ್' ಆಗಿದ್ದಾರೆ. ಪೀಪಲ್ ವಿತ್ ಡಿಸೆಬೆಲಿಟಿಯೊಂದಿಗೆ 3.70 ಲಕ್ಷ ಸಂಗ್ರಹಿಸಿದ ದುರ್ಗೇಶ್ ಜೆ. ಐಕೇರ್ ವಿಭಾಗದ ಗರಿಷ್ಠ ದೇಣಿಗೆ ಸಂಗ್ರಹಕಾರರಾಗಿದ್ದಾರೆ.

ಕಾರ್ಪೊರೇಟ್ ವಲಯದಲ್ಲಿ ಕೆಪಿಎಂಜಿ ಗರಿಷ್ಠ 7.25 ಲಕ್ಷ, ಎನ್‌ಜಿಒದಲ್ಲಿ ರೀಚಿಂಗ್ ಹ್ಯಾಂಡ್ 43.37 ಲಕ್ಷ, ಪೀಪಲ್ ವಿಥ್ ಡಿಸೆಬಿಲಿಟಿ 41.84 ಲಕ್ಷ, ಪ್ರೊ ವಿಷನ್ ಏಷ್ಯಾ 35.08 ಲಕ್ಷ ರೂ. ಸಂಗ್ರಹಿಸಿವೆ. ಈ ವರ್ಷ 9052 ವೈಯಕ್ತಿಕ ದೇಣಿಗೆದಾರರನ್ನು ಹೊಂದಿದ್ದು, 81 ಎನ್‌ಜಿಒಗಳು ಇದರ ಲಾಭ ಪಡೆದಿವೆ ಎಂದು ಮಾಹಿತಿ ನೀಡಲಾಯಿತು.

ಟಿಸಿಎಸ್‌ನ ಉಪಾಧ್ಯಕ್ಷ ಮತ್ತು ಹೈಟೆಕ್ ವರ್ಟಿಕಲ್‌ನ ಜಾಗತಿಕ ಮುಖ್ಯಸ್ಥ ನಾಗರಾಜ್ ಐಜರಿ, ಟಿಸಿಎಸ್ ಬೆಂಗಳೂರು ಕೇಂದದ ಮುಖ್ಯಸ್ಥ ಇ.ಎಸ್.ಚಕ್ರವರ್ತಿ, ಐಟಿಸಿ ವಿಂಡ್ಸರ್‌ನ ವ್ಯವಸ್ಥಾಪಕ ವೀರೇಂದ್ರ ರಾಜ್ದಾನ್, ಪ್ರೊಕ್ಯಾಮ್ ಇಂಟರ್‌ನ್ಯಾಷನಲ್‌ನ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಬಿ. ಸಿಂಗ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.