ADVERTISEMENT

13 ಮಾರ‌್ಗೋಸಾ ಮಹಲ್ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಪ್ರದರ್ಶನ ಕಲಾ ಸಂಸ್ಥೆಯು ಶುಕ್ರವಾರ ಮಾರ‌್ಗೋಸಾ ಮಹಲ್ ಎಂಬ ನಾಟಕ ಪ್ರದರ್ಶನ ಆಯೋಜಿಸಿದೆ. ಇದು 5ಡಿ ಅನುಭವ ನೀಡಲಿರುವ, ಭಯ ಹುಟ್ಟಿಸುವ ನಾಟಕವಾಗಿದೆ.

ಪಿ.ಡಿ.ಸತೀಶಚಂದ್ರ ನಿರ್ದೇಶನದ, ರಘು ದೀಕ್ಷಿತ್ ಸಂಗೀತ ನೀಡಿರುವ ಈ ನಾಟಕವು ನಾಲ್ಕನೇ ಪ್ರದರ್ಶನವಾಗಿದೆ.

ಐ.ಟಿ ಉದ್ಯೋಗಿಗಳ ಸುತ್ತ ಕಥೆ ರಚಿಸಲಾಗಿದ್ದು, ಅವರು ಒಂದು ಕಾನ್ಫರೆನ್ಸ್‌ಗೆಂದು ಹೋದಾಗ ನಡೆಯುವ ವಿಚಿತ್ರ ಹಾಗೂ ಹಾಸ್ಯ ಘಟನೆಗಳ ರಚನೆಯಾಗಿದೆ.
ಇದರ `ಟ್ಯಾಗ್ ಲೈನ್~ ಸೂಚಿಸುವಂತೆ ಇದು ಭಯ ಹಾಗೂ ಹಾಸ್ಯ ರಸಗಳ ಹದವಾದ ಮಿಶ್ರಣವನ್ನು ಹೊಂದಿರುವ ಕಥೆ.

ಸ್ನೇಹಿತರು ಕೆಲಸದ ಮೇಲೆ ಊರಿಗೆ ಬಂದು ಊರಾಚೆ ಇರುವ ತಂಗುದಾಣದಲ್ಲಿ ಅನಿರೀಕ್ಷಿತವಾಗಿ ಉಳಿಯುವ ಸಂದರ್ಭದಲ್ಲಿ ಉಂಟಾಗುವ ವಿಸ್ಮಯಕಾರಿ ಘಟನೆಗಳು ಹಾಗೂ ಸ್ನೇಹಿತರ ನಡುವಿನ ಹಾಸ್ಯ ಪ್ರಸಂಗಗಳು ನೋಡುಗರ ಮನಸೆಳೆಯುತ್ತವೆ.

 ಸ್ಥಳ: ಕೆಂಗಲ್‌ಹನುಮಂತಯ್ಯ ಕಲಾಸೌಧ, ರಾಮಾಂಜನೇಯ ದೆವಸ್ಥಾನದ ಆವರಣ, ಹನುಮಂತನಗರ. ಸಂಜೆ 7.30.ಟಿಕೆಟ್‌ಗಳಿಗೆ ಹಾಗೂ ಮಾಹಿತಿಗೆ: 98804 87682
 

ಪರಿಸರ ಉಳಿವಿಗೆ ಜಾಥಾ

ಕೆಂಗೇರಿ ಉಪನಗರದಲ್ಲಿರುವ ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಜಿನೆಸ್ ಸ್ಟಡೀಸ್‌ನ `ಗ್ರೀನ್ ಮಿಷಿನ್~ ಪರಿಸರ ಸಂಘ ಇತ್ತೀಚೆಗಷ್ಟೆ ಎಕೋ ಫ್ಯೂಚರ್ ಹೆಸರಿನಲ್ಲಿ ಪರಿಸರ ಜಾಥಾ ಕೈಗೊಂಡಿತ್ತು.

ಪರಿಸರ ರಕ್ಷಣೆ ಕುರಿತು ಇದುವರೆಗೂ ಗ್ರೀನ್ ಮಿಷಿನ್ 15ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಯಾಗಿದ್ದು, ಈ ಬಾರಿ ಇಂಧನ ಉಳಿತಾಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ನಡೆಸಿತು.

ವಿದ್ಯಾರ್ಥಿಗಳಲ್ಲಿ ಪರಿಸರ, ಸಮಾಜದ ಕುರಿತಾದ ಅರಿವು ಮೂಡಿಸಲು ಈ ಸಂಘ ಆರಂಭಗೊಂಡಿದ್ದಾಗಿ ಸಂಘದ ಮುಖ್ಯ ಸಮನ್ವಯ ಅಧಿಕಾರಿ ಚಿತ್ರಾ ಸಿ.ಎನ್ ತಿಳಿಸಿದ್ದಾರೆ.
ನಮ್ಮ ಮನೆಯ ಕುರಿತು ಹೇಗೆ ಹೆಚ್ಚಿನ ಕಾಳಜಿ ವಹಿಸುತ್ತೇವೊ ಹಾಗೆಯೇ ಭೂಮಿಯನ್ನು ಸ್ವಚ್ಛ, ಸುಂದರವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಕಾಲೇಜಿನ ಪ್ರಾಂಶುಪಾಲ ಜಯರಾಮ್ ಸಂದೇಶ ನೀಡಿದರು.

ಜ.6ರಂದು ನಡೆದ ಹಸಿರು ಭವಿಷ್ಯ (ಎಕೋ ಫ್ಯೂಚರ್) ಎಂಬ ಪರಿಸರ ಜಾಥಾವನ್ನು ಕರ್ನಾಟಕ ರಿನ್ಯುಯಬಲ್ ಎನರ್ಜಿ ಡೆವಲೆಪ್‌ಮೆಂಟ್ ಲಿಮಿಟೆಡ್(ಕೆಆರ್‌ಇಡಿಎಲ್) ಹಾಗೂ ದೀಪಾ ಸೋಲಾರ್ ಲೈಟಿಂಗ್ ಸಿಸ್ಟಮ್ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಉಪನ್ಯಾಸಕರೊಂದಿಗೆ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದು, ಕೆಂಗೇರಿ ಉಪನಗರ ಮುಖ್ಯ ಬಡಾವಣೆಗಳಲ್ಲಿ ಜಾಥಾ ಸಾಗಿತ್ತು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.