ಮಲ್ಲೇಶ್ವರದ ನಾದಜ್ಯೋತಿ ತ್ಯಾಗರಾಜಸ್ವಾಮಿ ಭಜನಾ ಸಭೆಯು 8ನೇ ವಾರ್ಷಿಕ ಹರಿದಾಸ ಸಂಭ್ರಮದ ಪ್ರಯುಕ್ತ ಎರಡು ದಿನಗಳ ಸಂಗೀತೋತ್ಸವ ಹಮ್ಮಿಕೊಂಡಿತ್ತು.
ಕನ್ನಿಕಾ ಪರಮೇಶ್ವರಿ ದೇವಾಲಯದ ಆವರಣದಲ್ಲಿರುವ ಆರ್‌ಪಿಎಸ್ ಸಭಾಂಗಣದಲ್ಲಿ ಆಕಾಶವಾಣಿಯ ಸಂಗೀತ ವಿಭಾಗದ ಕಾರ್ಯನಿರ್ವಾಹಕರಾದ
ಡಾ. ಎನ್. ರಘು ಕಾರ್ಯಕ್ರಮ ಉದ್ಘಾಟಿಸಿದರು.
ಗಾಯಕ ಎಸ್. ಶಂಕರ್, ತಿರುಪತಿಯ ಟಿಟಿಡಿ ಹರಿದಾಸ ಸಾಹಿತ್ಯ ಯೋಜನೆಯ ಪ್ರತಿನಿಧಿ ವಾದಿರಾಜ್, ಸಭೆಯ ನಿರ್ದೇಶಕ ಸೂತ್ರಂ ನಾಗರಾಜ ಶಾಸ್ತ್ರಿ ಮತ್ತು ವಿಮರ್ಶಕ ಡಾ. ಎಂ. ಸೂರ್ಯ ಪ್ರಸಾದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.