
ಪ್ರಜಾವಾಣಿ ವಾರ್ತೆ
ಪವಿತ್ರ ಆರ್ಥಿಕತೆಗಾಗಿಗ್ರಾಮಸೇವಾ ಸಂಘ ಆರಂಭಿಸಿರುವ ಸತ್ಯಾಗ್ರಹದಲ್ಲಿ ಸಂಘದ ಕಾರ್ಯಕರ್ತರ ಜೊತೆ ಚಿತ್ರನಟ ಕಿಶೋರ್ ಭಾಗವಹಿಸಿದ್ದರು.ಮಹಾತ್ಮ ಗಾಂಧಿ ರಸ್ತೆಯ ಕಾವೇರಿ ಎಂಪೋರಿಯಂ ಸಿಗ್ನಲ್ ಬಳಿ ಶನಿವಾರ ಸಂಜೆ ಜನರ ಸತ್ಯಾಗ್ರಹದ ದೀಕ್ಷೆ ಹಾಗೂ ಆರ್ಥಿಕ ಸಹಕಾರ ಕೋರುವಸಂದೇಶ ಪತ್ರ ಹಿಡಿದು ಅವರು ಸತ್ಯಾಗ್ರಹ ನಡೆಸಿದರು.
‘ಸ್ಥಳೀಯ ಸಂಪನ್ಮೂಲಗಳ ಕೇಂದ್ರಿತವಾದ ಆರ್ಥಿಕ ವ್ಯವಸ್ಥೆ ನಮ್ಮದಾಗಬೇಕಿದೆ.ಪರಿಸರ ರಕ್ಷಿಸುವ ಪ್ರಯತ್ನದೊಂದಿಗೆ ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡುವ ಕೆಲಸ ನಮ್ಮಿಂದಾಗಬೇಕಿದೆ‘ ಎಂದು ಕಿಶೋರ್ ಅಭಿಪ್ರಾಯಪಟ್ಟರು.
ಸತ್ಯಾಗ್ರಹದ ಭಾಗವಾಗಿ ಭಾನುವಾರ ಸಂಜೆ ನಡೆದ ಮುಶೈರಾದಲ್ಲಿ ಭಾಗವಹಿಸಿದ್ದ ಕವಿಗಳು ಉರ್ದು, ಕನ್ನಡ, ಬೆಂಗಾಲಿ, ಹಿಂದಿ ಕವಿತೆಗಳನ್ನು ವಾಚಿಸಿದರು.ಅಕ್ಟೋಬರ್ 2ರಿಂದ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.