ADVERTISEMENT

ಏಷ್ಯಾ ಆಭರಣ ಉತ್ಸವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 14:17 IST
Last Updated 1 ಡಿಸೆಂಬರ್ 2019, 14:17 IST
ಆಭರಣ
ಆಭರಣ   

ದಕ್ಷಿಣ ಭಾರತದ ಅತ್ಯುತ್ತಮ ಆಭರಣ ವಿನ್ಯಾಸಕರ ಮತ್ತು ಬ್ರಾಂಡ್‍ಗಳ ಚಿನ್ನ ಮತ್ತು ವಜ್ರಾಭರಣಗಳನ್ನು ಗ್ರಾಹಕರು ಒಂದೇ ಸೂರಿನಡಿಯಲ್ಲಿ ಖರೀದಿಸುವ ಅವಕಾಶವನ್ನುಏಷ್ಯಾ ಜುವೆಲ್ಸ್ ಫೇರ್ ಕಲ್ಪಿಸಿದೆ.

ವೈಟ್‌ಫೀಲ್ಡ್‌ನ ಹೋಟೆಲ್ ವಿವಂತಾ ಬೈ ತಾಜ್‌ನಲ್ಲಿ ಡಿಸೆಂಬರ್ 7 ಮತ್ತು 8 ರಂದುಏಷ್ಯಾ ಜುವೆಲ್ಸ್ ಫೇರ್ ಆಯೋಜಿಸಲಾಗಿದೆ. ಇದು 17ನೇ ಆವೃತ್ತಿಯಾಗಿದ್ದುಅತ್ಯಂತ ಆಕರ್ಷಕ ಮತ್ತು ವಿಶೇಷ ಆಭರಣ ದೊರೆಯುವ ತಾಣವಾಗಿದೆ.

ಬೆಂಗಳೂರು, ನವದೆಹಲಿ, ಮುಂಬೈ, ಜೈಪುರ, ಸೂರತ್ ಮತ್ತು ಹೈದರಾಬಾದ್‍ನ ಮುಂಚೂಣಿಯ ಎಲ್ಲ ಬ್ರಾಂಡೆಡ್‌ ಆಭರಣಗಳುಒಂದೇ ಸೂರಿನಲ್ಲಿ ದೊರೆಯಲಿವೆ.ಫೈನ್ ಗೋಲ್ಡ್ ಆಭರಣ, ವಜ್ರಾಭರಣ, ಪ್ಲಾಟಿನಂ ಆಭರಣ, ಸಾಂಪ್ರದಾಯಿಕ ಆಭರಣ, ವಿವಾಹದ ಆಭರಣ, ಅಮೂಲ್ಯ ಹರಳಿನ ಆಭರಣ, ಕುಂದನ್, ಜಡೌ ಮತ್ತು ಪೊಲ್ಕಿ ಆಭರಣ ಪ್ರದರ್ಶನದಲ್ಲಿ ಇರಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.