ADVERTISEMENT

ಇಂದಿನಿಂದ ಬೆಂಗಳೂರು ಬೈಡಿಸೈನ್‌

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 19:45 IST
Last Updated 14 ನವೆಂಬರ್ 2019, 19:45 IST
ಫೋಟೋ ಕೃಪೆ ಲಿಝ್ ವೆಸ್ಟ್‌ ಹಾಗೂ ಬೆಂಗಳೂರು ಬೈಡಿಸೈನ್‌
ಫೋಟೋ ಕೃಪೆ ಲಿಝ್ ವೆಸ್ಟ್‌ ಹಾಗೂ ಬೆಂಗಳೂರು ಬೈಡಿಸೈನ್‌   

ಬೆಂಗಳೂರು ಬೈಡಿಸೈನ್‌ನ ಎರಡನೇ ಆವೃತ್ತಿಯ ಕಾರ್ಯಕ್ರಮಗಳು ನವೆಂಬರ್ 15ರಿಂದ 24ರವರೆಗೆ ನಡೆಯಲಿವೆ. ಇನ್‌ಸ್ಟಾಲೇಶನ್‌ಗಳು, ಪ್ರದರ್ಶನಗಳು, ಕಾರ‍್ಯಾಗಾರಗಳು, ಸಮ್ಮೇಳನಗಳು, ಈವೆಂಟ್‌ಗಳು, ಸ್ಕ್ರೀನಿಂಗ್‌, ಪಾಪ್‌ ಅಪ್‌, ಮಾತುಕತೆ ಇತ್ಯಾದಿ ನಡೆಯಲಿವೆ.

ದೊಮ್ಮಲೂರಿನ ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್ ಸೇರಿದಂತೆ ಬೆಂಗಳೂರಿನ ಹತ್ತು ಕಡೆಗಳಲ್ಲಿ ಈ ವರ್ಷದ ಹಬ್ಬ ನಡೆಯಲಿದೆ. ಟೈಟನ್‌ ಕ್ಯಾಂಪಸ್, ಎಲೆಕ್ಟ್ರಾನಿಕ್ ಸಿಟಿ, ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್ಸ್‌, ವರ್ಕ್‌ ಬೆಂಚ್‌ ಪ್ರಾಜೆಕ್ಟ್ಸ್‌, ಅಲಸೂರು, ಕೋವರ್ಕ್ಸ್‌, ರೆಸಿಡೆನ್ಸಿ ರೋಡ್ ಹಾಗೂ ಇತರೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

‘ವಿನ್ಯಾಸ ಎಂಬುದು ವೈವಿಧ್ಯಮಯ. ಸಾಂಪ್ರದಾಯಿಕ ಸಂಸ್ಕೃತಿ ಮತ್ತು ವಹಿವಾಟುಗಳನ್ನು ಇದು ಒಳಗೊಂಡಿರುತ್ತದೆ. ಉತ್ಪನ್ನ ಮತ್ತು ಅದರ ಬಳಕೆಯ ಮೇಲೆ ವಿನ್ಯಾಸಗಾರರ ಗೌರವವೂ ಅಡಗಿರುತ್ತದೆ. ವಿನ್ಯಾಸಕ್ಕೊಂದು ಹೊಸ ಕಥೆಯನ್ನು ಕಟ್ಟಿಕೊಡುವ ಮೂಲಕ ವಿನ್ಯಾಸಗಾರರಿಗೆ ಗೌರವವನ್ನು ಒದಗಿಸುವುದು ಬೆಂಗಳೂರು ಬೈಡಿಸೈನ್‌ ಎರಡನೇ ಆವೃತ್ತಿಯ ವಿನ್ಯಾಸ ಕಾರ‍್ಯಕ್ರಮದ ಉದ್ದೇಶವಾಗಿದೆ’ ಎನ್ನುತ್ತಾರೆ ಬೆಂಗಳೂರು ಬೈಡಿಸೈನ್‌ನ ಸಂಸ್ಥಾಪಕಿ ಸುಪ್ರೀತಾ ಮೂರ್ತಿ.

ADVERTISEMENT

ಈ ಹಬ್ಬವು ಟೈಟಾನ್‌, ಏಷ್ಯನ್‌ ಪೇಂಟ್ಸ್, ಕೋವರ್ಕ್ಸ್‌, ಟೋಟಲ್ ಎನ್ವಿರಾನ್‌ಮೆಂಟ್‌, ಟ್ರೋಜನ್‌ ಪ್ಲೈವುಡ್‌, ಅನಂತ್‌ ನ್ಯಾಷನಲ್‌ ಯೂನಿವರ್ಸಿಟಿ, ಪರ್ಲ್‌ ಅಕಾಡೆಮಿ, ಜೆಡಿ ಇನ್‌ಸ್ಟಿಟ್ಯೂಟ್‌, ವರ್ಕ್‌ಬೆಂಚ್‌ ಪ್ರಾಜೆಕ್ಟ್ಸ್‌, ಆಸ್ಟ್ರೇಲಿಯನ್‌ ಕಾನ್ಸುಲೇಟ್ ಜನರಲ್‌, ಚೆನ್ನೈ, ಪ್ರೋ ಹೆಲ್ವೆಟಿಕಾ– ಸ್ವಿಸ್‌ ಆರ್ಟ್ಸ್‌ ಕೌನ್ಸಿಲ್‌, ಬ್ರಿಟಿಷ್‌ ಕೌನ್ಸಿಲ್, ಪೋಲಿಷ್‌ ಇನ್‌ಸ್ಟಿಟ್ಯೂಟ್‌ ದೆಹಲಿ, ಎನ್‌ಜಿಎಂಎ ಬೆಂಗಳೂರು, ಡಿಸೈನ್‌ಅಪ್‌, ಹೆಂಡ್ರಿಕ್ಸ್ ಮತ್ತು ಮಂಕಿ ಶೋಲ್ಡರ್‌ ಸಹಭಾಗಿತ್ವದಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.