ADVERTISEMENT

ಗಾಲಿಕುರ್ಚಿ ಕ್ರಿಕೆಟ್‌ ಪಂದ್ಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 20:15 IST
Last Updated 4 ಮಾರ್ಚ್ 2019, 20:15 IST
ವ್ಹೀಲ್‌ಚೇರ್ ಕ್ರಿಕೆಟ್ ಮ್ಯಾಚ್
ವ್ಹೀಲ್‌ಚೇರ್ ಕ್ರಿಕೆಟ್ ಮ್ಯಾಚ್   

ಫೈರ್‌ಫಾಕ್ಸ್ ಬೈಕ್ಸ್ ಕಂಪನಿಯು #ಎವೆರಿಡೇಎಬಿಲಿಟಿ ಆಂದೋಲನದ ಅಂಗವಾಗಿ ಅಂಗವಿಕಲರಿಗಾಗಿ ‘ವ್ಹೀಲ್‌ಚೇರ್ ಕ್ರಿಕೆಟ್ ಪಂದ್ಯ’ ಆಯೋಜಿಸಿತ್ತು. ಗುಳಿಮಂಗಲದ ಹುಸ್ಕೂರಿನಲ್ಲಿರುವ ಆರ್‌ಕೆಆರ್ ಸ್ಪೋರ್ಟ್ಸ್ ಮೈದಾನದಲ್ಲಿ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಗಾಲಿಕುರ್ಚಿಗಳಲ್ಲಿ ಕುಳಿತು ಕ್ರಿಕೆಟ್ ಆಡಿದ ಅಂಗವಿಕಲರು ಉತ್ತಮ ಪ್ರದರ್ಶನ ನೀಡಿದರು.

ಅಂಗವಿಕರಲ್ಲಿ ತಾವೂ ಎಲ್ಲರಂತೆ ಸಾಮಾನ್ಯರು ಎಂಬ ಆತ್ಮವಿಶ್ವಾಸ ಮೂಡಿಸಲು ಸದೃಢ ಫೈರ್‌ಫ್ಯಾಕ್ಸ್ ಬೈಕರ್‌ಗಳು ಹಾಗೂ ವಿವಿಧ ಕಾಲೇಜು ಮತ್ತು ಕಂಪನಿಗಳ ಸ್ವಯಂಸೇವಕರ ಜೊತೆಗೆ ಮಿಶ್ರ ತಂಡಗಳಲ್ಲಿ ಕ್ರಿಕೆಟ್‌ ಆಡಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಆಯೋಜಕ ಆದಿತ್ಯ ಮುಂಜಲ್, ‘ಈ ವರ್ಷದ #ಎವೆರಿಡೇಎಬಿಲಿಟಿ ಆಂದೋಲನದಲ್ಲಿ ಅಂಗವಿಕಲರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ದೇಹದಾರ್ಢ್ಯ, ಮಾನಸಿಕ ಸದೃಢತೆ ಅಗತ್ಯವಿರುವ ಸಾಹಸ ಕ್ರೀಡೆಗಳಲ್ಲೂ ಅಂಗವಿಕಲರು ತಮ್ಮ ಪ್ರತಿಭೆಯನ್ನು ಸಮರ್ಥವಾಗಿ ಪ್ರದರ್ಶಿಸಿದ್ದಾರೆ. ಆ ಮೂಲಕ ತಮಗೆ ಅವಕಾಶ ಸಿಕ್ಕರೆ ಯಾವುದೇ ಸಂಸ್ಥೆಯ ಆಸ್ತಿಯಾಗುವ ಸಾಮರ್ಥ್ಯವಿದೆ ಎಂದು ಸಾಬೀತುಪಡಿಸಿದ್ದಾರೆ’ ಎಂದರು.

ADVERTISEMENT

ವಾಲೆಂಟಿಯರ್4ಇಂಡಿಯಾ ಸಂಸ್ಥೆ ಹಾಗೂ ಅಡ್ವೆಂಚರ್ ಬಿಯಾಂಡ್ ಬ್ಯಾರಿಯರ್ಸ್ ಫೌಂಡೇಷನ್‌ ಸಹಯೋಗದಲ್ಲಿ ಈ ಆಟೋಟ ಆಯೋಜನೆಗೊಂಡಿತ್ತು.ಈ ಆಂದೋಲನವನ್ನು ಯಶಸ್ವಿಯಾಗಿಸಲು ಫೈರ್‌ಫಾಕ್ಸ್ ಬೈಕ್ಸ್ ತನ್ನ ಮಳಿಗೆಗಳಲ್ಲಿ ಅಂಗವಿಕಲರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕೆ ವಾಲೆಂಟಿಯರ್4ಇಂಡಿಯಾ ಹಾಗೂ ಎಬಿಬಿಎಫ್ ಸಹಕಾರ ನೀಡಲಿವೆ.

#ಎವೆರಿಡೇಎಬಿಲಿಟಿ ಆಂದೋಲನ: ನಗರ ಪ್ರದೇಶಗಳ ಜನರ ಬದುಕಿಗೆ ಸಾಹಸ ಹಾಗೂ ಕ್ರೀಡೆಯನ್ನು ಹತ್ತಿರ ತರುವ ಉದ್ದೇಶದಿಂದ ಫೈರ್‌ಫಾಕ್ಸ್ ಬೈಕ್ಸ್ ಕಂಪನಿಯು ‘ಎವೆರಿಡೇ ಅಡ್ವೆಂಚರ್’ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನಸಾಮಾನ್ಯರಿಗೆ ಅನಿರೀಕ್ಷಿತ ಥ್ರಿಲ್ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದನ್ನು ಸಿಎಸ್‌ಆರ್ ಕಾರ್ಯಕ್ರಮದ ಮೂಲಕ ಇನ್ನಷ್ಟು ಜೀವಂತವಾಗಿಸಲು ಫೈರ್‌ಫಾಕ್ಸ್ ಬೈಕ್ಸ್ ಹಾಗೂ ವಾಲೆಂಟಿಯರ್4ಇಂಡಿಯಾ ಸಂಸ್ಥೆಗಳು ಜಂಟಿಯಾಗಿ #ಎವೆರಿಡೇಎಬಿಲಿಟಿ ಎಂಬ ಆಂದೋಲನ ರೂಪಿಸಿವೆ. ಇದಕ್ಕೆ ಅಡ್ವೆಂಚರ್ಸ್ ಬಿಯಾಂಡ್ ಬ್ಯಾರಿಯರ್ಸ್ ಫೌಂಡೇಷನ್ (ಎಬಿಬಿಎಫ್) ಕೂಡ ಕೈಜೋಡಿಸಿದೆ.

ಫೈರ್‌ಫಾಕ್ಸ್ ಬೈಕ್ಸ್: ದೇಶದ ಜನರಿಗೆ ಉತ್ಕೃಷ್ಟ ಸೈಕ್ಲಿಂಗ್ ಅನುಭವ ಒದಗಿಸುತ್ತಿರುವ ಕಂಪನಿ ಫೈರ್‌ಫಾಕ್ಸ್ ಬೈಕ್ಸ್. ಇದು ಇತ್ತೀಚಿನ ಬ್ರ್ಯಾಂಡ್. ಫೈರ್‌ಫಾಕ್ಸ್‌ನಲ್ಲಿ ಮೌಂಟೇನ್, ಆಲ್-ಟೆರೇನ್, ರೋಡ್, ಬಿಎಂಎಕ್ಸ್ ಹಾಗೂ ಕಿಡ್ಸ್ ಸೈಕಲ್‌ ಸೇರಿದಂತೆ 70ಕ್ಕೂ ಹೆಚ್ಚು ಬಗೆಯ ಬೈಸಿಕಲ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.