ADVERTISEMENT

ಮತ ಜಾಗೃತಿಗೆ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 20:15 IST
Last Updated 25 ಮಾರ್ಚ್ 2019, 20:15 IST
ಯೋಧರ ಪಥಸಂಚಲನ
ಯೋಧರ ಪಥಸಂಚಲನ   

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನ ಹಾಗೂ ಮತದಾನ ಜಾಗೃತಿಗಾಗಿ ವೈಟ್‌ಫೀಲ್ಡ್ ವಿಭಾಗದ ಪೋಲಿಸರು ಮತ್ತು ಸಿಐಎಸ್ಎಫ್ ಅರೆಸೇನಾ ಯೋಧರು ಪಥ ಸಂಚಲನ ನಡೆಸಿದರು.

ಕೆ.ಆರ್.ಪುರ ತಾಲ್ಲೂಕು ತಹಶೀಲ್ದಾರರ ಕಚೇರಿಯಿಂದ ಆರಂಭವಾದ ಪಥ ಸಂಚಲನ ದೇವಸಂದ್ರ ಮುಖ್ಯರಸ್ತೆ, ಮಸೀದಿ ರಸ್ತೆ, ಅಯ್ಯಪ್ಪನಗರ, ಭಟ್ರಹಳ್ಖಿ ಬಸವನಪುರ ಮುಖ್ಯ, ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಮೂಲಕ ಸಂತ ಆಂಥೋನಿಸ್ವಾಮಿ ಚರ್ಚ್ ವರೆಗೆ ಸಾಗಿತು.

ಸುಮಾರು 8 ಕಿ.ಮೀ.ವರೆಗೆ ಸಾಗಿದ ಪಥ ಸಂಚಲನದ ನೇತೃತ್ವವನ್ನುವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್ ಅಹಾದ್, ಕೆ.ಆರ್.ಪುರ ವೃತ್ತ ನಿರೀಕ್ಷಕ ಜಯರಾಜ್ ವಹಿಸಿದ್ದರು. 250 ಕ್ಕೂ ಹೆಚ್ಚು ಯೋಧರು ಹಾಗೂ ಪೋಲಿಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.