ADVERTISEMENT

ಬೆಂಗಳೂರಿನಲ್ಲಿ ವಿಶ್ವದ ದುಬಾರಿ ಚಾಕಲೇಟ್‌!

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 9:56 IST
Last Updated 5 ನವೆಂಬರ್ 2019, 9:56 IST
ಫಬೆಲ್ ಚಾಕಲೇಟ್‌
ಫಬೆಲ್ ಚಾಕಲೇಟ್‌   

ಐಟಿಸಿಯ ಫಬೆಲ್ ಎಕ್ಸ್‌ಕ್ವಿಸಿಟಿ ಚಾಕಲೇಟ್ಸ್‌ ಬಿಡುಗಡೆ ಮಾಡಿರುವ ‘ಟ್ರಿನಿಟಿ–ಟ್ರಫಲ್ಸ್‌ ಎಕ್ಸಟ್ರಾ ಆರ್ಡಿನೇರ್‌’ ಹೆಸರಿನ ಒಂದು ಕೆ.ಜಿ ಬಾಕ್ಸ್‌ ಚಾಕಲೇಟ್‌ ಬೆಲೆ ₹4 ಲಕ್ಷ!

ಪ್ರಾನ್ಸ್‌ನ ಖ್ಯಾತ ಶೆಫ್‌ ಫಿಲಿಪ್‌ ಕಾಂಟಿಚಿನಿ ಸಹಾಯದಿಂದ ಫಬೆಲ್‌ ಮಾಸ್ಟರ್‌ ಚಾಕಲೇಟರ್‌ ಈ ಚಾಕಲೇಟ್‌ ತಯಾರಿಸಿವೆ. ಇದು ಗಿನ್ನಿಸ್‌ ದಾಖಲೆಗೆ ಸೇರ್ಪಡೆಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಕೈಯಿಂದ ತಯಾರಿಸಲಾದ ಮರದ ಪೆಟ್ಟಿಗೆಯಲ್ಲಿರುವ ಆಕರ್ಷಕ ಚಾಕಲೇಟ್‌ ಜೀವನ ಚಕ್ರ ಪ್ರತಿನಿಧಿಸುವ ಅತೀಂದ್ರೀಯ ಪರಿಕಲ್ಪನೆಯನ್ನು ಸಂಕೇತಿಸುತ್ತವೆ ಎಂದು ತಯಾರಕರು ಹೇಳಿದ್ದಾರೆ.

ADVERTISEMENT

ಮುಂಬೈನ ಐಟಿಸಿ ಗ್ರ್ಯಾಂಡ್‌ ಸೆಂಟ್ರಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಶೆಫ್‌ ಫಿಲಿಪ್‌ ಕಾಂಟಿಚಿನಿ ಸಮ್ಮುಖದಲ್ಲಿ ಚಾಕಲೇಟ್‌ ಬಿಡುಗಡೆ ಮಾಡಲಾಯಿತು. ಇದೊಂದು ಸೀಮಿತ ಅವಧಿಯ ಕೊಡುಗೆಯಾಗಿದೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.

ತೆಂಗಿನಕಾಯಿ, ವೆನಿಲ್ಲಾ ಬೀಜ, ಕೋಕೋ ಬೀಜ, ಅಪರೂಪದ ಜಮೈಕನ್‌ ಬ್ಲೂ ಮೌಂಟೇನ್‌ ಕಾಫಿ, ಬೆಲ್ಜಿಯನ್‌ ವೈಟ್‌ ಚಾಕಲೇಟ್‌, ಡೆಸ್ಟ್ರಾಯರ್‌ನಲ್ಲಿರುವ ಗ್ರ್ಯಾಂಡ್‌ ಕ್ರೂ ಚಾಕಲೇಟ್‌, ಫ್ರಾನ್ಸ್‌ ಕಡಲ ಕಿನಾರೆಯ ಉಪ್ಪು, ಇವನ್ನು ತಯಾರಿಸಲಾಗಿದೆ.

ಬೆಂಗಳೂರಿನಲ್ಲಿ ಲಭ್ಯ:ಫಬೆಲ್ @ ದಿ ಚಾಕಲೇಟ್ ಬೊಟಿಕ್,ಐಟಿಸಿ ಗಾರ್ಡೇನಿಯಾ,#1,ರೆಸಿಡೆನ್ಸಿ ರಸ್ತೆ, ದೂರವಾಣಿ ಸಂಖ್ಯೆ: 080 66825270 ಮತ್ತುಫಬೆಲ್ @ ದಿ ಚಾಕೊಲೇಟ್ ಬೊಟಿಕ್, ಐಟಿಸಿ ವಿಂಡ್ಸರ್,#25,ವಿಂಡ್ಸರ್ ಸ್ಕ್ವೇರ್,ಗಾಲ್ಫ್ ಕೋರ್ಸ್ ರೋಡ್‌, ದೂರವಾಣಿ ಸಂಖ್ಯೆ: 080 6140111

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.