ADVERTISEMENT

ಮುಂಗಾರು ಮಳೆಗೂ ಮುನ್ನ...

ಸಾರ್ವಜನಿಕರ ದೂರು ಸ್ವೀಕರಿಸಲು 10 ನಿಯಂತ್ರಣ ಕೊಠಡಿ 

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:30 IST
Last Updated 27 ಮೇ 2019, 19:30 IST
ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮಲ್ಲೇಶ್ವರ ಸಂಪಿಗೆ ರಸ್ತೆಯುದ್ದಕ್ಕೂ ಮರಗಳು ಉರುಳಿದ್ದ ದೃಶ್ಯ ಕಂಡು ಬಂತು –ಪ್ರಜಾವಾಣಿ ಚಿತ್ರ / ಇರ್ಷಾದ್ ಮಹಮ್ಮದ್- PHOTO / IRSHAD MAHAMMAD
ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮಲ್ಲೇಶ್ವರ ಸಂಪಿಗೆ ರಸ್ತೆಯುದ್ದಕ್ಕೂ ಮರಗಳು ಉರುಳಿದ್ದ ದೃಶ್ಯ ಕಂಡು ಬಂತು –ಪ್ರಜಾವಾಣಿ ಚಿತ್ರ / ಇರ್ಷಾದ್ ಮಹಮ್ಮದ್- PHOTO / IRSHAD MAHAMMAD   

ಮುಂಗಾರು ಕಾಲಿಡುವ ಮುನ್ನವೇ ಭಾನುವಾರ ರಾತ್ರಿ ಸುರಿದ ಮಳೆಯ ಆರ್ಭಟಕ್ಕೆ ನಗರದ ಹಲವೆಡೆ ನೆಲಕ್ಕುರುಳಿದನೂರಾರು ಮರಗಳು ಮತ್ತು ವಿದ್ಯುತ್‌ ಕಂಬಗಳನ್ನುತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇದು ಚಿಂತೆಗೀಡುಮಾಡಿದೆ.

ನಗರದಲ್ಲಿ ಭಾನುವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 8ರವರೆಗೆ ಸರಾಸರಿ 50 ಮಿಲಿ ಮೀಟರ್‌ ಮಳೆಯಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5.09 ಮಿಲಿ ಮೀಟರ್‌ ಮತ್ತು ಎಚ್‌ಎಎಲ್‌ನಲ್ಲಿ 6.40 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಂಬ ಮತ್ತುಮರದ ಕೊಂಬೆಗಳು ಉರುಳಿ ಬಿದ್ದ ಕಾರಣ ವಿದ್ಯುತ್‌ ತಂತಿಗಳು ತುಂಡಾಗಿ ನೇತಾಡುತ್ತಿವೆ. ರಾತ್ರಿಯಿಂದಲೇ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದುಹೆಚ್ಚಿನ ಬಡಾವಣೆಗಳಲ್ಲಿ ಕತ್ತಲು ಆವರಿಸಿತ್ತು. ಸೋಮವಾರ ಮಧ್ಯಾಹ್ನದ ನಂತರ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್‌ ಸಂಪರ್ಕ ಕಡಿತದಿಂದನೀರು ಸರಬರಾಜು ಇಲ್ಲದೆ ಶಾಲೆ, ಕಾಲೇಜು, ಕಚೇರಿಗಳಿಗೆ ಹೋಗುವ ಜನರು ಪರದಾಡುವಂತಾಯಿತು.

ADVERTISEMENT

ವಸಂತನಗರ, ಜಯಮಹಲ್‌, ಕಂಟೋನ್ಮೆಂಟ್‌ ರೈಲು ನಿಲ್ದಾಣದ ಹಿಂದಿನ ರಸ್ತೆ,ಮಲ್ಲೇಶ್ವರ, ಕಬ್ಬನ್‌ ಪಾರ್ಕ್ ನಲ್ಲಿ ನೂರಾರು ವರ್ಷದ ಹಳತಾದ ದೈತ್ಯಾಕಾರದ ಮರಗಳು ನೆಲಕ್ಕೊರಗಿದ್ದು,ಇದರಿಂದಸಂಚಾರಕ್ಕೆ ತೊಂದರೆಯಾಗಿದೆ.

ನಿನ್ನೆಯ ಮಳೆಗೆ ನಗರದಲ್ಲಿ 56 ದೈತ್ಯಾಕಾರದ ಮರಗಳು ಬುಡಮೇಲಾಗಿದ್ದು. 596ಕ್ಕೂ ಹೆಚ್ಚು ರೆಂಬೆ, ಕೊಂಬೆಗಳು ರಸ್ತೆಯಲ್ಲಿ ಬಿದ್ದಿವೆ. ಆ ಪೈಕಿ ಬಿಬಿಎಂಪಿ ಸಿಬ್ಬಂದಿ ಈಗಾಗಲೇ 35 ಮರ ಮತ್ತು 118 ಕೊಂಬೆಗಳನ್ನು ತೆರವುಗೊಳಿಸಿದ್ದಾರೆಎಂದು ಬಿಬಿಎಂಪಿ ಅರಣ್ಯ ವಿಭಾಗದ ಡಿಸಿಎಫ್‌ ಎಂ.ಕೆ. ಚೋಳರಾಜಪ್ಪ ‘ಮೆಟ್ರೊ’ಗೆ ತಿಳಿಸಿದ್ದಾರೆ.

ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಬಿದ್ದ ಮರಗಳನ್ನು ತಕ್ಷಣ ತೆರವುಗೊಳಿಸಲು 24 ತಂಡಗಳನ್ನು ಸಿದ್ಧಗೊಳಿಸಲಾಗಿದೆ. ಇನ್ನಷ್ಟು ಸಿಬ್ಬಂದಿಯನ್ನು ಒದಗಿಸು ವಂತೆ ಪ್ರಸ್ತಾಪ ಕಳಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನಿಯೋಜಿಸಿಕೊಂಡಿದ್ದೇವೆ. ಬಿಬಿಎಂಪಿ ಮತ್ತು ಬೆಸ್ಕಾಂ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದರು.

ಗಾಳಿಗೆ 140ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಉರುಳಿದ ಕಾರಣ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯವಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಂಗಳೂರು ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ 88 ಕಂಬಗಳು ಹಾನಿಗೀಡಾಗಿವೆ. ವಿಜಯನಗರ, ಶಿವಾಜಿನಗರ, ರಾಜಾನಕುಂಟೆ, ಮಲ್ಲೇಶ್ವರ, ಜೆ.ಪಿ. ನಗರ, ಕೋರಮಂಗಲ, ಬಾಣಸವಾಡಿ, ಎಚ್‌ಎಸ್‌ಆರ್‌ ಲೇಔಟ್‌, ರಾಜಾಜಿನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ

ಮಳೆ ಆನಾಹುತ ತಡೆಗೆ ಪಾಲಿಕೆ ಸಮರ್ಪಕ ಕ್ರಮಗಳನ್ನು ಕೈಗೊಂಡಿದೆ.ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆಬಿಬಿಎಂಪಿಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗುವ ಸಂದರ್ಭದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು24 ತಾಸು ಕಾರ್ಯನಿರ್ವಹಿಸುವ 61ತಾತ್ಕಾಲಿಕ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಪ್ರಹರಿ ವಾಹನ ಮತ್ತು ಅರಣ್ಯ ವಿಭಾಗ ತಂಡಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ತಿಳಿಸಿದ್ದಾರೆ.

ಒಎಫ್‌ಸಿ ಕೇಬಲ್‌ ತೆರವು: ಎಲ್ಲೆಡೆ ಅಂತರ್ಜಾಲ ಸಂಪರ್ಕ ಕಡಿತ

ವಿದ್ಯುತ್‌ ಕಂಬ ಮತ್ತು ಮರಗಳಿಗೆ ಇಳಿಬಿಟ್ಟಿದ್ದ ಒಎಫ್‌ಸಿ ಕೇಬಲ್‌ ಸುರುಳಿಗಳನ್ನು ಬಿಬಿಎಂಪಿ ಸಿಬ್ಬಂದಿ ಸೋಮವಾರ ಕತ್ತರಿಸಿ ಬಿಸಾಕಿದ್ದಾರೆ.ಇದರಿಂದಾಗಿ ನಗರದ ಅನೇಕ ಕಡೆ ಟಿ.ವಿ ಮತ್ತು ಅಂತರ್ಜಾಲ ಸಂಪರ್ಕ ಕಡಿತಗೊಂಡಿದೆ.

ವಸಂತನಗರದ ಶಾಂಗ್ರಿಲಾ ಹೋಟೆಲ್‌ ಎದುರಿನ ರಸ್ತೆ ಸೇರಿದಂತೆ ಅನೇಕ ಕಡೆ ಒಎಫ್‌ಸಿ ಕೇಬಲ್‌ ಸುರುಳಿಗಳುರಸ್ತೆ ಮತ್ತು ಫುಟ್‌ಫಾತ್‌ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.ಬಿಬಿಎಂಪಿ ಸಿಬ್ಬಂದಿ ಸ್ಥಳದಿಂದ ತೆರವಳುವ ಮುನ್ನವೇ ಖಾಸಗಿ ಸಂಸ್ಥೆಯ ಸಿಬ್ಬಂದಿ ಮತ್ತೆ ಕೇಬಲ್‌ ಜೋಡಣೆ ಕೆಲಸ ಆರಂಭಿಸಿದರು.

ಇನ್ನೂ ಐದು ಭಾರಿ ಮಳೆ ಸಾಧ್ಯತೆ

ಭಾನುವಾರ ರಾತ್ರಿ ಗಂಟೆಗೆ 72 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದೇ ಸಾಕಷ್ಟು ಮರಗಳು ನೆಲಕ್ಕುರುಳಲು ಕಾರಣ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್‌. ಪಾಟೀಲ ತಿಳಿಸಿದ್ದಾರೆ.

ಅದೇ ರೀತಿಬೆಂಗಳೂರಿನಲ್ಲಿ ಸೋಮವಾರ ರಾತ್ರಿಯೂ ಭಾರಿ ಗುಡುಗು, ಸಿಡಿಲು ಮತ್ತು ಬಿರುಗಾಳಿಯಿಂದ ಕೂಡಿದ ಶೇ 51ರಿಂದ ಶೇ70ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಪ್ರತಿದಿನ ಸಂಜೆ ಮತ್ತು ರಾತ್ರಿ ಭಾರಿ ಗಾಳಿಯಿಂದ ಕೂಡಿದ ಮಳೆಯಾಗಲಿದೆ. ನಾಳೆಯಿಂದ ಮುಂದಿನ ಐದು ದಿನಗಳ ಕಾಲ ದಕ್ಷಿಣ ಒಳನಾಡಿನಲ್ಲಿ ಶೇ 25ರಿಂದ ಶೇ50ರಷ್ಟು ಚದುರಿದ ಮಳೆಯಾಗಲಿದೆ.ಜೂನ್‌ 2,3 ಮತ್ತು 5ರಂದು ಭಾರಿ ಮಳೆಯಾಗುವ ಸಂಭವ ಇದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.