ADVERTISEMENT

ಜುವೆಲ್ಸ್ ಆಫ್ ಇಂಡಿಯಾ ಆಭರಣ ಪ್ರದರ್ಶನ, ಮಾರಾಟ ಮೇಳ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 19:45 IST
Last Updated 10 ಜನವರಿ 2020, 19:45 IST
   
""

ಜುವೆಲ್ಸ್ ಆಫ್ ಇಂಡಿಯಾ ಹಾಗೂ ಎಕ್ಸ್ ಪೋ ದಿಂದ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳವು ರಾಮಮೂರ್ತಿ ನಗರದ ಲೋಟಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿದೆ. ಜ.11ರಿಂದ 12ರವರೆಗೆ ಈ ಮೇಳ ನಡೆಯಲಿದೆ.

ನಗರದ ಪ್ರಮುಖ 15 ಆಭರಣ ಮಾರಾಟಗಾರರು ಇಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿ ಆಧುನಿಕ, ಟೆಂಪಲ್‌, ಸಾಂಪ್ರದಾಯಿಕ ವಿನ್ಯಾಸದ ಆಭರಣಗಳು ಲಭ್ಯ. ಜ.10ರಂದು ಜುವೆಲ್ಸ್ ಆಫ್ ಇಂಡಿಯಾದ ರಾಯಭಾರಿಯಾಗಿರುವ ಪ್ರಣೀತ ಸುಭಾಷ್ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಜುವೆಲರ್ಸ್ ಅಸೋಷಿಯೇಷನ್ ಅಧ್ಯಕ್ಷ ಟಿ.ಎ. ಶರವಣ ಇದ್ದರು.

ಈ ಪ್ರದರ್ಶನ ನಡೆಯುವ ಮೂರು ದಿನಗಳ ಕಾಲ ಲಕ್ಕಿ ಡಿಪ್ ಇದ್ದು, ಒಂದು ಲಕ್ಷ ರೂ ಮೌಲ್ಯದ ವಜ್ರದ ಓಲೆಯನ್ನು ಒಬ್ಬ ಅದೃಷ್ಟಶಾಲಿಗೆ ಪ್ರತಿದಿನ ಉಡುಗೊರೆಯಾಗಿ ನೀಡಲಾಗುತ್ತಿದೆ.

ADVERTISEMENT

**

ನೂತನ ಮಳಿಗೆ ಆರಂಭೋತ್ಸವದಲ್ಲಿ ಟಿ.ಎಸ್‌. ಕಲ್ಯಾಣರಾಮನ್‌, ರಾಜೇಶ್‌ ಕಲ್ಯಾಣರಾಮನ್‌ ಮತ್ತು ರಮೇಶ್‌ ಕಲ್ಯಾಣರಾಮನ್‌

ಕಲ್ಯಾಣ್ ಜ್ಯುವೆಲರ್ಸ್‌ ಬಾಟಿಕ್ ಷೋರೂಂ
ಕಲ್ಯಾಣ್ ಜ್ಯುವೆಲರ್ಸ್‌ ದಕ್ಷಿಣ ಭಾರತದಲ್ಲಿ ತನ್ನ ಮೊಟ್ಟಮೊದಲ ಬಾಟಿಕ್ ಶೋರೂಂ ಉದ್ಘಾಟಿಸಿದೆ. ಈ ಆಭರಣ ಬ್ರಾಂಡ್‌ನ 143ನೇ ಮಳಿಗೆ ವೈಟ್‌ಫೀಲ್ಡ್‌ನಲ್ಲಿರುವ ಫೀನಿಕ್ಸ್ ಮಾಲ್‌ನಲ್ಲಿದೆ. ಇದೊಂದು ಮಹಿಳಾ ವಿಶೇಷ ಶೋರೂಂ.

ಈಗಾಗಲೇ ಈ ಬ್ರಾಂಡ್‌ನ ಮಳಿಗೆಗಳು ಮಾರತ್‌ಹಳ್ಳಿ, ಮಲ್ಲೇಶ್ವರಂ, ಕೋರಮಂಗಲ, ಜಯನಗರ ಮತ್ತು ಡಿಕಿನ್‌ಸನ್ ರಸ್ತೆಯಲ್ಲಿವೆ.

‘ಕಲ್ಯಾಣ್ ಜ್ಯುವೆಲರ್ಸ್‌ಗೆ ನಗರದಲ್ಲಿ ಆತ್ಮೀಯ ಸ್ಪಂದನೆ ಸಿಕ್ಕಿದ್ದು, ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಮೊತ್ತಮೊದಲ ಮಳಿಗೆ ಆರಂಭಿಸಲು ಉತ್ತೇಜನ ನೀಡಿದೆ. ಈ ವಿಶೇಷ ಶೋರೂಂ ನಮ್ಮ ವೈವಿಧ್ಯಮಯ ಶ್ರೇಣಿಯ ಆಯ್ದ ಆಭರಣ ವಿನ್ಯಾಸಗಳನ್ನು ಪ್ರದರ್ಶಿಸಲಿದೆ’ ಎಂದು ಮಳಿಗೆಯ ಆರಂಭೋತ್ಸವದಲ್ಲಿ ಉಪಸ್ಥಿತರಿದ್ದ ಕಲ್ಯಾಣ್ ಜ್ಯುವೆಲರ್ಸ್‌ ಸಿಎಂಡಿ ಟಿ.ಎಸ್.ಕಲ್ಯಾಣರಾಮನ್ ಹೇಳಿದರು.

ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಈ ಆಭರಣ ಬ್ರಾಂಡ್, ಎಲ್ಲ ಚಿನ್ನ ಹಾಗೂ ವಜ್ರಾಭರಣಗಳ ಮೇಕಿಂಗ್ ಚಾರ್ಜ್‌ನಲ್ಲಿ ಶೇ 30ರಷ್ಟು ರಿಯಾಯ್ತಿ ನೀಡಲಿದೆ. 15 ಸಾವಿರ ರೂಪಾಯಿಗಿಂತ ಅಧಿಕ ಮೌಲ್ಯದ ಖರೀದಿಗೆ ಆಕರ್ಷಕ ಖಾತರಿ ಉಡುಗೊರೆಗಳನ್ನು ನೀಡಲಿದೆ. ಈ ಆಫರ್ ಜ.15ರವರೆಗೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.