ADVERTISEMENT

ಕನ್ನಡತಿ ಡಾ. ಪ್ರಿಯಾಂಕ ‘ಮಿಸೆಸ್ ಪ್ಲಾನೆಟ್‌’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 19:45 IST
Last Updated 18 ನವೆಂಬರ್ 2019, 19:45 IST
ಡಾ. ಪ್ರಿಯಾಂಕ ಅಭಿಷೇಕ್‌ಗೆ‘ಮಿಸಸ್ ಪ್ಲಾನೇಟ್‌ 2019’ ಕಿರೀಟ
ಡಾ. ಪ್ರಿಯಾಂಕ ಅಭಿಷೇಕ್‌ಗೆ‘ಮಿಸಸ್ ಪ್ಲಾನೇಟ್‌ 2019’ ಕಿರೀಟ   

ಬಲ್ಗೇರಿಯಾದ ಸೋಫಿಯಾದಲ್ಲಿ ಇರಾನಾ ಪಾಪಝೋವಾ ಸಂಸ್ಥೆ ಈ ತಿಂಗಳಲ್ಲಿ ಆಯೋಜಿಸಿದ್ದ 10ನೇ ಪ್ರತಿಷ್ಠಿತ ಅಂತರರಾಷ್ಟ್ರೀಯ ‘ಮಿಸೆಸ್ ಪ್ಲಾನೆಟ್ 2019’ ಸುಂದರಿಯರ ಸ್ಪರ್ಧೆಯಲ್ಲಿ ಡಾ. ಪ್ರಿಯಾಂಕ ಅಭಿಷೇಕ್ ಆಯ್ಕೆಯಾಗಿದ್ದಾರೆ.

ಮದುವೆಯಾದ ಸುಂದರ ಮಹಿಳೆಯರನ್ನು ಒಂದೆಡೆ ಸೇರಿಸುವ ಮತ್ತು ಅವರನ್ನು ಕಲೆ, ಸಂಸ್ಕೃತಿ, ಜೀವನ ಪದ್ಧತಿ, ದೇಶ, ದೇಶಗಳ ನಡುವೆ ಬಾಂಧವ್ಯ ವೃದ್ದಿಸುವ ಪ್ರತಿನಿಧಿಯನ್ನಾಗಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಇಂತಹ ಪ್ರಮುಖ ಸುಂದರಿ ಸ್ಪರ್ಧೆಯ ಅಂತಿಮ ಘಟ್ಟಕ್ಕೆ ಪ್ರಿಯಾಂಕ ಅಭಿಷೇಕ್ ಅವರೊಬ್ಬರೇ ತಲುಪಿದರು. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಮಿಸೆಸ್ ಇಂಡಿಯಾ ಸುಂದರಿ ಸ್ಪರ್ಧೆಯಲ್ಲಿಯೂ ಅವರು ಗೆದ್ದು ಸಂಭ್ರಮಿಸಿದ್ದರು. ಈ ಸ್ಪರ್ಧೆಯನ್ನು ದೀಪಾಲಿ ಫಡ್ನೀಸ್ ಆಯೋಜಿಸಿದ್ದರು. ಭಾರತದ ಸೌಂದರ್ಯ ಮತ್ತು ಪ್ರತಿಭೆಯನ್ನು ನಿರೂಪಿಸಲು ಮಿಸೆಸ್ ಇಂಡಿಯಾ ಅತ್ಯುತ್ತಮ ವೇದಿಕೆಯಾಗಿದೆ.

ADVERTISEMENT

ವೃತ್ತಿಯಲ್ಲಿ ದಂತ ವೈದ್ಯರಾಗಿರುವ ಪ್ರಿಯಾಂಕ, ಕಲಾವಿದೆ ಕೂಡ. ಹಾಸನದಲ್ಲಿ ಜನಿಸಿದ ಅವರು ಬೆಂಗಳೂರಿನ ಅಭಿಷೇಕ್ ಸುಬ್ರಮಣ್ಯ ಅವರನ್ನು ಮದುವೆಯಾಗಿದ್ದಾರೆ. ಇವರು ಐರಾ ಮತ್ತು ವೀರಾ ಎಂಬ ಇಬ್ಬರು ಮಕ್ಕಳ ತಾಯಿ. ಜಗತ್ತಿನಾದ್ಯಂತ ಬಂದಿದ್ದ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ಪ್ರಿಯಾಂಕ ಅಭಿಷೇಕ್ ಅವರು ಅಣ್ವಸ್ತ್ರ ಕುರಿತಂತೆ ಏಳು ಮಂದಿ ತೀರ್ಪುಗಾರರ ಸಮ್ಮುಖದಲ್ಲಿ ಚತುರ ಉತ್ತರ ನೀಡಿ ಸೈ ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.