ADVERTISEMENT

ಸೌಂದರ್ಯ ಸ್ಪರ್ಧೆ ಆಡಿಷನ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 19:45 IST
Last Updated 7 ಜನವರಿ 2020, 19:45 IST
ವಿವಾಹಿತ ಮಹಿಳೆಯರಿಗಾಗಿ ಆಯೋಜಿಸಲಾದ ಸೌಂದರ್ಯ ಸ್ಪರ್ಧೆ
ವಿವಾಹಿತ ಮಹಿಳೆಯರಿಗಾಗಿ ಆಯೋಜಿಸಲಾದ ಸೌಂದರ್ಯ ಸ್ಪರ್ಧೆ   
""

ವಿವಾಹಿತ ಮಹಿಳೆಯರಿಗಾಗಿ ಆಯೋಜಿಸಲಾದ‘ಮಿಸೆಸ್ ಇಂಡಿಯಾ ಐಯಾಮ್ ಫವರ್ ಪುಲ್ ಕರ್ನಾಟಕ– 2020’ ಸೌಂದರ್ಯ ಸ್ಪರ್ಧೆಯ ಅಂತಿಮ ಆಡಿಷನ್‌ ಈಚೆಗೆ ನಗರದಲ್ಲಿ ನಡೆಯಿತು.

ಆಡಿಷನ್‌ನಲ್ಲಿ ಒಟ್ಟು 40 ಮಂದಿ ಭಾಗವಹಿಸಿದ್ದರು. ಈ ಪೈಕಿ 20 ಮಂದಿಯನ್ನು ಅಂತಿಮ ಸುತ್ತಿಗೆ ಆಯ್ಕೆಮಾಡಲಾಯಿತು.ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣದ ಮಹಿಳೆಯರು ಭಾಗವಹಿಸಿದ್ದರು.

ನಟ ಜೆಕೆ, ಮಿಸೆಸ್ ಗ್ಲೋಬೆಲ್ ಯೂನಿವರ್ಸಲ್ ಸವಿತಾ ರೆಡ್ಡಿ, ಸಂತೋಷ್ ರೆಡ್ಡಿ, ಶ್ವೇತಾ ಮಯೂರಿ, ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್ ಚೈತನ್ಯ ಮಿಸೆಸ್ ಇಂಡಿಯಾ ಟೂರಿಸಂ, ಮಿಸೆಸ್ ವರ್ಲ್ಡ್ ವೈಡ್ ಶ್ವೇತಾ ನಿರಂಜನ್, ಮಿಸೆಸ್ ಇಂಡಿಯಾ ಮಧುರ ವಿ ಆಚಾರ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

ADVERTISEMENT

ಮಹಿಳೆಯರ ಪ್ರತಿಭೆ ಗುರುತಿಸಿ ಮಾಡೆಲಿಂಗ್, ಜಾಹೀರಾತು, ಸಿನಿಮಾ ಮತ್ತಿತರ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಡಾ. ನಂದಿನಿ ನಾಗರಾಜ್ ಈ ಸ್ಪರ್ಧೆ ಆಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.