ADVERTISEMENT

‘ಕೇಕಾಲಜಿ–2019’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:46 IST
Last Updated 24 ಸೆಪ್ಟೆಂಬರ್ 2019, 19:46 IST
ಮೋದಿ ಕೇಕ್‌ ಜತೆ ಶೆಫ್‌ ಅಕ್ಷಯ್‌ ಗೌಡ
ಮೋದಿ ಕೇಕ್‌ ಜತೆ ಶೆಫ್‌ ಅಕ್ಷಯ್‌ ಗೌಡ   

ನಗರದ ವೈಟ್‌ಕ್ಯಾಪ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಆಫ್‌ ಪೇಸ್ಟ್ರಿಯ ಶೆಫ್‌ ಅಕ್ಷಯ್‌ ಗೌಡ 25 ಕೆ.ಜಿ. ಕೇಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ತಯಾರಿಸಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಕೇಕಾಲಜಿ–2019’ ಕೇಕ್‌ ಪ್ರದರ್ಶನದಲ್ಲಿಮೂರು ಅಡಿ ಎತ್ತರದ ‘ಮೋದಿ ಕೇಕ್‌’ ಎಲ್ಲರ ಗಮನ ಸೆಳೆದಿದೆ. ಅಕ್ಷಯ್‌ ಈ ಕೇಕ್‌ ತಯಾರಿಸಲು ನಾಲ್ಕು ದಿನ ತೆಗೆದುಕೊಂಡಿದ್ದಾರೆ.

ಶೆಫ್‌ ಸ್ಯಾಮಿ ಸಂಪೂರ್ಣ ಸಕ್ಕರೆಯಿಂದ 12 ಅಡಿ ಎತ್ತರದ ಪ್ಯಾರಿಸ್‌ನ ಐಫೆಲ್‌ ಟವರ್‌ ಕೂಡ ಆಕರ್ಷಕವಾಗಿತ್ತು. ವೈಟ್‌ಕ್ಯಾಪ್ಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ಆಫ್ ಪೇಸ್ಟ್ರಿ ಕಾರ್ಯನಿರ್ವಾಹಕ ಪೇಸ್ಟ್ರಿ ಶೆಫ್‌ ಅರವಿಂದ್‌ ತಂಡದ ನೇತೃತ್ವ ವಹಿಸಿದ್ದರು.

ADVERTISEMENT

ಕೇಕ್‌ ಕಲಾವಿದರು, ಬೇಕರ್‌ಗಳು, ಚಾಕೋಲೇಟಿಯರ್‌, ವೃತ್ತಿಪರ ಬಾಣಸಿಗರು, ಪೇಸ್ಟ್ರಿ ತಜ್ಞರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.