ADVERTISEMENT

ಹಣ್ಣು, ತರಕಾರಿ ತೊಳೆಯಲು‌ ಯಂತ್ರ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 10:04 IST
Last Updated 6 ಜುಲೈ 2020, 10:04 IST
ಓಜೋನೇಟರ್‌ ಯಂತ್ರ
ಓಜೋನೇಟರ್‌ ಯಂತ್ರ   

ಮಾರುಕಟ್ಟೆಯಿಂದ ತರುವ ಹಣ್ಣು, ತರಕಾರಿ, ಆಹಾರಧಾನ್ಯ, ಬೇಳೆಕಾಳುಗಳನ್ನುಸ್ವಚ್ಛವಾಗಿ ತೊಳೆಯಲು ಯಂತ್ರವೊಂದು ಮಾರುಕಟ್ಟೆಗೆ ಬಂದಿದೆ.

ಗಂಗಾವತಿಯ ಲೇಬರ್‌ ವೆಲ್ಫೇರ್‌‌ ಟ್ರಸ್ಟ್‌ ಸಿದ್ಧಪಡಿಸಿರುವ ‘ಮಾಮ್ಸ್‌ಕೇರ್‌ ಓಝೋನೇಟರ್‌’ ಯಂತ್ರ ಹಣ್ಣು, ತರಕಾರಿಗಳ ಮೇಲ್ಮೈನಲ್ಲಿ ಇರುವ ರಾಸಾಯನಿಕ ಅಂಶ, ಸೂಕ್ಷ್ಮಾಣು ಜೀವಿ ಮತ್ತು ಕ್ರಿಮಿ, ಕೀಟಗಳನ್ನು ಕೊಲ್ಲುತ್ತದೆ. ಸದ್ಯದ ಸ್ಥಿತಿಯಲ್ಲಿ ಹೊರಗಿನಿಂದ ಕೊಂಡು ತರುವ ವಸ್ತುಗಳನ್ನು ಕೊರೊನಾ ಸೋಂಕಿನಿಂದ ಮುಕ್ತಗೊಳಿಸಲು ಕೂಡ ಈ ಯಂತ್ರ ನೆರವಾಗುತ್ತದೆ ಎನ್ನುತ್ತಾರೆ ಯಂತ್ರದ ತಯಾರಕರು.

ಮಾಮ್ಸ್‌ಕೇರ್‌ ಯಂತ್ರ ಸುಮಾರು 1 ಕೆ.ಜಿ ಯಷ್ಟು ಭಾರವಾಗಿದ್ದು, ಓಜೋನ್‌ ಡಿಸ್‌ಇನ್ಫೆಕ್ಷನ್‌ ಟೆಕ್ನಾಲಜಿ ಪ್ರಕಾರ ಕೆಲಸ ಮಾಡುತ್ತದೆ.ಈ ಯಂತ್ರದ ಮೂಲಕ ಒಂದು ಬಾರಿ ಸುಮಾರು 10 ಕೆ.ಜಿ ತರಕಾರಿ ಅಥವಾ ಹಣ್ಣುಗಳನ್ನು ತೊಳೆಯಬಹುದು.

ADVERTISEMENT

ಹೇಗೆ ಕೆಲಸ ಮಾಡುತ್ತದೆ?

ತರಕಾರಿಯನ್ನು ಒಂದು ಪಾತ್ರೆಯಲ್ಲಿ ನೀರಿನಲ್ಲಿ ಮುಳುಗಿಸಿಟ್ಟು ನಂತರ ವಿದ್ಯುತ್‌ಚಾಲಿತ ಓಜೋನೇಟರ್ ಯಂತ್ರದ‌ ಪೈಪ್ ಅನ್ನು ಪಾತ್ರೆಯೊಳಗೆ ಇಡಬೇಕು. ಸುಮಾರು 15ರಿಂದ 40 ನಿಮಿಷದಲ್ಲಿ ಶೇ 90ರಷ್ಟು ವಿಷಕಾರಿ ರಾಸಾಯನಿಕ ಅಂಶಗಳನ್ನು ತೆಗೆದು ಹಾಕುತ್ತದೆ.

ತರಕಾರಿ ಮತ್ತು ಹಣ್ಣಿನ ಮೇಲಿರುವ ಬ್ಯಾಕ್ಟಿರಿಯಾ, ವೈರಾಣು, ಫಂಗಸ್‌ ಹಾಗೂ ಕೀಟನಾಶಕ ದಂತಹರಾಸಾಯನಿಕ, ಕ್ರಿಮಿ, ಕೀಟಗಳನ್ನು ತೆಗೆದು ಹಾಕುತ್ತದೆ. ತೊಳೆಯಲು ಯಾವುದೇ ದ್ರಾವಣ ಬಳಸುವುದಿಲ್ಲ. ಆದ್ದರಿಂದ ಈ ತರಕಾರಿ, ಹಣ್ಣು ಸೇವನೆಗೆ ಸೂಕ್ತಎಂದು ವೆಲ್ಫೇರ್‌ ಟ್ರಸ್ಟ್‌ನ ಗೌರವ ಅಧ್ಯಕ್ಷ ಸೈಯ್ಯದ್‌ ಅಬ್ದುಲ್ಲಾ ಉಸೈನಿಮೆಹರ್‌ಪಾಷಾ ಮಾಹಿತಿ ನೀಡಿದರು.

ಈ ಯಂತ್ರವನ್ನು 2012ರಲ್ಲಿಯೇ ಅಭಿವೃದ್ಧಿ ಮಾಡಿದ್ದರೂ ಕೊರೊನ ಸಮಯದಲ್ಲಿ ತುಂಬಾ ಬೇಡಿಕೆಯಿದೆ. ಒಂದು ಯಂತ್ರದ ಬೆಲೆ ₹8,500 ಎಂದು ತಿಳಿಸಿದರು.

ನೀರು ಶುದ್ಧೀಕರಣ ಯಂತ್ರ

ಲೇಬರ್‌ ವೆಲ್‌ಫೇರ್‌ ಟ್ರಸ್ಟ್‌ ಕಡಿಮೆ ವೆಚ್ಚದಲ್ಲಿ ನೀರು ಶುದ್ಧೀಕರಣ ಯಂತ್ರ, ಅಟೊಮೇಟಿಕ್‌ ಹ್ಯಾಂಡ್‌ ಸ್ಯಾನಿಟೈಸರ್‌ ಯಂತ್ರ ಅಭಿವೃದ್ಧಿಪಡಿಸಿದೆ. ಈ ಮೂರು ಯಂತ್ರಗಳನ್ನುಟ್ರಸ್ಟ್‌ ಕಾಂಬೋ ರೂಪದಲ್ಲಿ ರಿಯಾಯಿತಿ ಬೆಲೆಗೆ ನೀಡುತ್ತದೆ. 5 ವರ್ಷ ವಾರಂಟಿ ಹಾಗೂ ಉಚಿತ ಸರ್ವೀಸ್‌ ನೀಡುತ್ತದೆ.ಸಂಪರ್ಕ ಸಂಖ್ಯೆ: 94491 53383. http://www.labourwelfaretrust.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.