ADVERTISEMENT

ವೈಲ್ಡ್ ಈಡೆನ್ಸ್ ಛಾಯಾಗ್ರಹಣ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 20:15 IST
Last Updated 7 ಮಾರ್ಚ್ 2019, 20:15 IST
   

ರೋಸ್ಟಂ ಸ್ಟೇಟ್ ಅಟಾಮಿಕ್ ಕಾರ್ಪೊರೇಷನ್ ತನ್ನ ವೈಲ್ಡ್ ಈಡೆನ್ಸ್ ಪ್ರಾಜೆಕ್ಟ್ ಭಾಗವಾಗಿ ‘ವೈಲ್ಡ್ ಈಡೆನ್ಸ್ ಫೋಟೋಗ್ರಫಿ ಸ್ಪರ್ಧೆ' ಪ್ರಕಟಿಸಿದೆ. ಈ ಸ್ಪರ್ಧೆಯು ಮಾರ್ಚ್ 1ರಿಂದ 10ರವರೆಗೆ ನಡೆಯಲಿದೆ. ಭಾರತದಾದ್ಯಂತ ಎಲ್ಲ ಹವ್ಯಾಸಿ ಮತ್ತು ಉದಯೋನ್ಮುಖ ಛಾಯಾಗ್ರಾಹಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಛಾಯಾಗ್ರಾಹಕರು ತಮ್ಮ ವನ್ಯಜೀವಿ ಛಾಯಾಚಿತ್ರಗಳನ್ನು #ವೈಲ್ಡ್ಈಡೆನ್ಸ್ ಫೋಟೋಗ್ರಫಿ, #ವೈಲ್ಡ್ಈಡೆನ್ಸ್ ಸೌಥ್ ಏಷ್ಯಾ(#WildEdensPhotography, #WildEdensSouthAsia) ಎಂಬ ಹ್ಯಾಷ್ ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕು.

ಭಾಗವಹಿಸುವವರು ಈ ಕೆಳಕಂಡ ವಿಭಾಗಗಳಲ್ಲಿ ಮೂರು ಛಾಯಾಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು.

ADVERTISEMENT

ವೈಲ್ಡರ್‌ನೆಸ್ ಲ್ಯಾಂಡ್‌ಸ್ಕೇಪ್‌, ಪಕ್ಷಿಗಳು, ಸಸ್ತನಿಗಳು, ಸರೀಸೃಪಗಳು ಮತ್ತು ಉಭಯಚರಗಳು, ಕೀಟಗಳು ಮತ್ತು ಇತರೆ ಅಕಶೇರುಕಗಳು ಮತ್ತು ಅಂತರ್ಜಲದ ವಿಸ್ಮಯಗಳು.

ಎಪ್ಪತ್ತು ಪ್ರವೇಶಗಳನ್ನು ಪಟ್ಟಿ ಮಾಡಿ ಅವುಗಳನ್ನುMetkere.com ಸಂಪಾದಕ ಇಲಿಯಾ ಕಬನೊವ್ ಅಂತಿಮಗೊಳಿಸಲಿದ್ದಾರೆ. ಸ್ಪರ್ಧೆಯ ಮೂವರು ವಿಜೇತರನ್ನು ಮಾರ್ಚ್ 17ರಂದು ಪ್ರಕಟಿಸಲಾಗುತ್ತದೆ.ವಿಜೇತರಿಗೆ ವಿವಿಧ ಬಹುಮಾನಗಳೊಂದಿಗೆ ಹಾಲಿವುಡ್ ನಟಿ ಫ್ರಿದಾ ಪಿಂಟೊ ಅವರನ್ನು (ಮುಂಬೈನಲ್ಲಿ ನಡೆಯುವ `ವೈಲ್ಡ್ ಈಡೆನ್ಸ್: ಸೌಥ್ ಏಷ್ಯಾ' ಕಾರ್ಯಕ್ರಮದಲ್ಲಿ) ಭೇಟಿಯಾಗುವ ಅವಕಾಶ ದೊರೆಯುತ್ತದೆ.

ವೈಲ್ಡ್ ಈಡೆನ್ಸ್ ಕುರಿತು:ವೈಲ್ಡ್ ಈಡೆನ್ಸ್ ರೋಸ್ಟ್ಂನ ಪ್ರಾಜೆಕ್ಟ್‌. ಇದನ್ನು ನ್ಯಾಷನಲ್ ಜಿಯಾಗ್ರಾಫಿಕ್ ಪ್ರಸಾರ ಮಾಡುತ್ತದೆ. ಜಾಗತಿಕ ತಾಪಮಾನದಿಂದ ಸಂಕಷ್ಟಕ್ಕೆ ಸಿಲುಕುತ್ತಿರುವ ಅಪರೂಪದ ತಾಣಗಳ ಕುರಿತು ಸಾಕ್ಷ್ಯ ಚಿತ್ರಗಳ ಸರಣಿ ಚಿತ್ರೀಕರಿಸಿ ಪ್ರಸಾರ ಮಾಡುತ್ತದೆ. ಈ ಪ್ರಾಜೆಕ್ಟ್‌ನ ಮುಖ್ಯ ಉದ್ದೇಶ ಪರಿಸರ ಬದಲಾವಣೆ ಕುರಿತು ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವುದು. ಸ್ವಚ್ಛ ವಿದ್ಯುತ್‌ ಶಕ್ತಿಗೆ ಜಾಗತಿಕ ಬದಲಾವಣೆ ತರುವುದು.

ರೋಸ್ಟಂ ಕುರಿತು: ದಿ ರಷ್ಯನ್ ಸ್ಟೇಟ್‌ ಅಟಾಮಿಕ್ ಎನರ್ಜಿ ಕಾರ್ಪೊರೇಷನ್ ರೋಸ್ಟಂ ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆ ನಿರ್ಮಿಸಿದ್ದು ಈಗ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ(ಎನ್.ಪಿ.ಸಿ.ಐ.ಎಲ್) ಅದರ ನಿರ್ವಹಣೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.