ADVERTISEMENT

ಕಾವ್ಯ ಶಿವರಾತ್ರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 19:45 IST
Last Updated 20 ಫೆಬ್ರುವರಿ 2020, 19:45 IST
ಕಿ.ರಂ.ನಾಗರಾಜ್
ಕಿ.ರಂ.ನಾಗರಾಜ್   

ಡಾ.ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಪ್ರೊ. ಕಿ.ರಂ.ನಾಗರಾಜ ಅಹೋರಾತ್ರಿ ಕಾವ್ಯಗಾಯನ ‘ಕಾವ್ಯ ಶಿವರಾತ್ರಿ’ಯನ್ನು ಶುಕ್ರವಾರ ಹಮ್ಮಿಕೊಂಡಿದೆ.

ಅಹೋರಾತ್ರಿಯ ಕಾರ್ಯಕ್ರಮಗಳಿಗೆ ವೇದಿಕೆ ಸಜ್ಜಾಗಿದೆ. ಕಾವ್ಯಮಂಡಲ ಮತ್ತು ಜನಸಂಸ್ಕೃತಿ ಪ್ರತಿಷ್ಠಾನದ ಸಹಯೋಗದಲ್ಲಿಈ ಕಾರ್ಯಕ್ರಮ ನಡೆಯುತ್ತಿದ್ದು, ಮಂಟೇಸ್ವಾಮಿ ಮತ್ತು ಮಲೆ ಮಹಾದೇಶ್ವರ ಮಹಾಕಾವ್ಯ ಗಾಯನವನ್ನು ದೊಡ್ಡಗವಿ ಬಸಪ್ಪ ಮತ್ತು ತಂಡ ನಡೆಸಿಕೊಡಲಿದ್ದಾರೆ.

ಪ್ರೊ. ಕಿ.ರಂ.ನಾಗರಾಜ ಅವರಿಗೆ ಜನಪದ ಮಹಾಕಾವ್ಯಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಅವುಗಳಲ್ಲಿ ಅವಿತಿರುವ ಜೀವಸತ್ವ, ಅಂತಃಸತ್ವಗಳನ್ನು ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರು ಉಣಬಡಿಸುತ್ತಿದ್ದರು. ವಿಚಾರ ಸಂಕಿರಣಗಳಲ್ಲಿ ಕೂಡ ಜನಪದ ಮಹಾಕಾವ್ಯಗಳ ಕುರಿತು ವಿಭಿನ್ನ ಒಳನೋಟಗಳನ್ನು ಅವರು ನೀಡುತ್ತಿದ್ದರು.
ಕಾವ್ಯಮಂಡಲದಿಂದ ಪ್ರತಿ ಶಿವರಾತ್ರಿಯಂದು ಕಾವ್ಯ ಶಿವರಾತ್ರಿ ಹೆಸರಿನಲ್ಲಿ ಜನಪದ ಮಹಾಕಾವ್ಯಗಳನ್ನು ನೀಲಗಾರರಿಂದ ಹಾಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದರು.

ADVERTISEMENT

ಕಿ.ರಂ.ನಾಗರಾಜ ಅವರ 75ನೇ ವರ್ಷಾಚರಣೆಯನ್ನು ಅರ್ಥಪೂರ್ಣ ಮತ್ತು ಸಾಹಿತ್ಯ ಲೋಕದಲ್ಲಿ ದಾಖಲಾಗಿಸಲು ಯೋಜನೆ ರೂಪಿಸಲಾಗಿದೆ. ಕಿರಂ ಸಾಹಿತ್ಯ ಲೋಕಕ್ಕೆ ಗುಂಗು ಹಿಡಿಸಿದ ಮಂಟೇಸ್ವಾಮಿ ಮತ್ತು ಮಲೆಮಹದೇಶ್ವರ ಕಾವ್ಯಗಳನ್ನು ದೊಡ್ಡಗವಿ ಬಸಪ್ಪ ಮತ್ತು ತಂಡ ನಿರಂತರವಾಗಿ ಕಾವ್ಯಶಿವರಾತ್ರಿಯಲ್ಲಿ ಹಾಡುತ್ತಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಸಿದ್ದಲಿಂಗಯ್ಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೇಣುಗೋಪಾಲ್ ಕೆ.ಆರ್. ವಹಿಸಿಕೊಳ್ಳಲಿದ್ದು, ಕುಲಸಚಿವರಾದ ಬಿ.ಕೆ. ರವಿ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಕೆ.ಎನ್.ಕವನ ಮತ್ತು ಡಾ.ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಪ್ರೊ.ಬಿ. ಗಂಗಾಧರ ಭಾಗವಹಿಸಲಿದ್ದಾರೆ.

ಅಹೋರಾತ್ರಿ ಕಾವ್ಯಗಾಯನ ಕಾರ್ಯಕ್ರಮದಲ್ಲಿ ಕೆ.ಮರುಳಸಿದ್ದಪ್ಪ, ಶೂದ್ರ ಶ್ರೀನಿವಾಸ್, ಅಗ್ರಹಾರ ಕೃಷ್ಣಮೂರ್ತಿ, ಶ್ರೀನಿವಾಸ್ ಜಿ ಕಪ್ಪಣ್ಣ, ಡಾ.ಕೆ.ನಲ್ಲೂರು ಪ್ರಸಾದ್, ಡಾ.ನಾಗಭೂಷಣ್ ಸಿ, ಡಾ. ಸುಮಿತ್ರ ಎಂ., ಡಾ.ಚಿತ್ತಯ್ಯ ಡಿ.ಕೆ., ಡಾ.ಶಶಿಕಲಾ ಹೆಚ್, ಡಾ. ವಡ್ಡೆ ಹೇಮಲತಾ, ಡಾ. ಡಿ. ಡೊಮೆನಿಕ್, ಡಾ. ಕಾ.ವೆಂ.ಶ್ರೀನಿವಾಸಮೂರ್ತಿ, ಡಾ. ಮುನಿಯಪ್ಪ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಲಿದ್ದಾರೆ.

ಸ್ಥಳ– ಡಾ.ವೆಂಕಟಗಿರಿಗೌಡ ಸ್ಮಾರಕ, ಸಭಾಂಗಣ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಶುಕ್ರವಾರ ಸಂಜೆ 6ರಿಂದ ಬೆಳಿಗ್ಗೆ 6ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.