ADVERTISEMENT

ಹಿರೋಷಿಮಾದಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

ಸೇಂಟ್ ಕ್ಲಾರೆಟ್ ಶಾಲೆ ಭಾಗಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:45 IST
Last Updated 24 ಸೆಪ್ಟೆಂಬರ್ 2019, 19:45 IST
ಜಪಾನಿನ ಹಿರೋಷಿಮಾದಲ್ಲಿ ಜವಾಹರಲಾಲ್‌ ನೆಹರು ಅವರು ಕೊಡುಗೆ ನೀಡಿದ ಹಿಮಾಲಯದ ದೇವದಾರು ಮರ ಸ್ಪರ್ಶಿಸಿ ಖುಷಿ ಪಟ್ಟ ಸೇಂಟ್ ಕ್ಲಾರೆಟ್ ಹಾಗೂ ಅಂಥೋಣಿ ಕ್ಲಾರೆಟ್ ಶಾಲೆ ಮಕ್ಕಳು
ಜಪಾನಿನ ಹಿರೋಷಿಮಾದಲ್ಲಿ ಜವಾಹರಲಾಲ್‌ ನೆಹರು ಅವರು ಕೊಡುಗೆ ನೀಡಿದ ಹಿಮಾಲಯದ ದೇವದಾರು ಮರ ಸ್ಪರ್ಶಿಸಿ ಖುಷಿ ಪಟ್ಟ ಸೇಂಟ್ ಕ್ಲಾರೆಟ್ ಹಾಗೂ ಅಂಥೋಣಿ ಕ್ಲಾರೆಟ್ ಶಾಲೆ ಮಕ್ಕಳು   

ದಾಸರಹಳ್ಳಿ ಸಮೀಪ ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಶಾಲೆ ಹಾಗೂ ಅಂಥೋಣಿ ಕ್ಲಾರೆಟ್ ಶಾಲೆ ಹಿರೋಷಿಮಾದ ವಿಂಡೋ ಚಾಯ್‌ಕ್ಲಬ್‌ನಲ್ಲಿ ಇತ್ತೀಚೆಗೆ ನಡೆದ 6ನೇ ವರ್ಷದ ಅಂತರರಾಷ್ಟ್ರೀಯ ಭಾವೈಕ್ಯತೆಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಪ್ರಾಂಶುಪಾಲರಾದ ರೆ.ಫಾದರ್ ಬೆನ್ನಿಮಾಥ್ಯೂ ಮತ್ತು ರೆ.ಫಾದರ್ ಜೋಷಿ ಅವರೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಿ ಭರತನಾಟ್ಯ ಹಾಗೂ ಸಾಂಪ್ರದಾಯಿಕ ಸಂಗೀತ ಪ್ರಸ್ತುತಪಡಿಸಿದರು. ಆ ದೇಶದ ಜನಪ್ರಿಯ ಹಾಡುಗಳಾದ ಪ್ರೊಲಾಂಗ್ಸ್ ಕಲಿತು ಹಾಡಿದ್ದನ್ನು ಸಭೆ ಮೆಚ್ಚುಗೆ ವ್ಯಕ್ತಪಡಿಸಿತು.

ಜಪಾನಿನ ಟೋಕಿವಾಡೈ ಸಮುದಾಯದವರ ನೃತ್ಯವನ್ನು ಕೊಡಾನಿ ಪ್ರಾಥಮಿಕ ಶಾಲೆ ಮತ್ತು ಟಕೆಡಾ ಪ್ರೌಢಶಾಲೆಯಲ್ಲಿ ಪ್ರದರ್ಶಿಸಲಾಯಿತು. ಪ್ರತಿಯಾಗಿ ಆ ಶಾಲೆಯ ಮಕ್ಕಳು ಭಾರತದ ಸಾಂಪ್ರಾದಾಯಿಕ ಸಂಗೀತವನ್ನು ಹಾಡುವ ಮೂಲಕ ಸಾಂಸ್ಕೃತಿಕ ಭಾವೈಕ್ಯತೆಯನ್ನು ಮೆರೆದರು. ಜೊತೆಗೆ ಜಪಾನಿನ ಡ್ರಮ್‌ವಾಡೈಕೆ ವಾದ್ಯದ ವಾದನ, ಸೂರನಬುಕ್ಕಿ ಕಂಡಮಾ ನೃತ್ಯ ಪ್ರಸ್ತುತಪಡಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.