ADVERTISEMENT

ನೀರಿನ ರಕ್ಷಣೆಗಾಗಿ ವಾಕಥಾನ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 14:22 IST
Last Updated 1 ಡಿಸೆಂಬರ್ 2019, 14:22 IST
ನೀರಿನ ಸಂರಕ್ಷಣೆಗಾಗಿ ನಡೆದ ಬೃಹತ್ ವಾಕಥಾನ್‌ನಲ್ಲಿ ಪಾಲ್ಗೊಂಡವರು
ನೀರಿನ ಸಂರಕ್ಷಣೆಗಾಗಿ ನಡೆದ ಬೃಹತ್ ವಾಕಥಾನ್‌ನಲ್ಲಿ ಪಾಲ್ಗೊಂಡವರು   

ನೀ ರಿಗಾಗಿ ವಾಕಥಾನ್ರಾಜ್ಯದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ವಚ್ಛ ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದಉದಕ್ ಸಂಸ್ಥೆ ಭಾನುವಾರ ನೀರಿಗಾಗಿ ನಡಿಗೆ ಆಯೋಜಿಸಿತ್ತು.

ಜೋಸೆಫ್ ಹೈಸ್ಕೂಲ್ ಗ್ರೌಂಡ್‌ನಿಂದ ಆರಂಭವಾದ ಚಿನ್ನಸ್ವಾಮಿ ಕ್ರೀಡಾಂಗಣ, ಜಿಪಿಯು ಸರ್ಕಲ್ ವಿಧಾನಸೌಧ, ಕಬ್ಬನ್ ಪಾರ್ಕ್ ಮೂಲಕ ಐದು ಕಿಲೋಮೀಟರ್ 'ನೀರಿಗಾಗಿ ನಡೆ' ಜಾಥಾ ನಡೆಸಲಾಯಿತು. ಜಾಥಾದಲ್ಲಿ ಸುಮಾರು 5೦೦೦ಸಾವಿರ ಜನ ಭಾಗವಹಿಸಿದ್ದರು. ಪೋಲಿಸ್ ಜಂಟಿ ಆಯುಕ್ತ (ಸಂಚಾರ) ರವಿಕಾಂತೆಗೌಡ, ಚಿತ್ರನಟಿ ನೀತು ಹಾಗೂ ಪ್ರಮುಖ ಗಣ್ಯ ವ್ಯಕ್ತಿಗಳು ಚಿತ್ರ ನಟರುಗಳು ಪಾಲ್ಗೊಂಡಿದ್ದರು

ಜನರಲ್ಲಿ ಸ್ವಚ್ಛ ಕುಡಿಯುವ ನೀರಿನ ಜಾಗೃತಿ ಮೂಡಿಸುವ ದೃಷ್ಠಿಯಿಂದಉದಕ್ ಸಂಸ್ಥೆಯು ರಾಜ್ಯದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಮಾಲುರು, ಶ್ರೀನಿವಾಸಪುರ, ಕೆಜಿಎಫ್, ಬಂಗಾರಪೇಟೆ, ನೆಲಮಂಗಲ, ತುಮಕೂರಿನ ಸುಮಾರು 320 ಸರ್ಕಾರಿ ಶಾಲೆಗಳ ಸುಮಾರು 21,080 ವಿದ್ಯಾರ್ಥಿಗಳಿಗೆ ಸ್ಚಚ್ಛ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿದೆಎಂದು ಉದಕ್ ಸಂಸ್ಥೆ ಅಧ್ಯಕ್ಷೆ ಭಾವನ ತಿಳಿಸಿದ್ದಾರೆ.

ADVERTISEMENT
ನೀರಿನ ಸಂರಕ್ಷಣೆಗಾಗಿ ನಡೆದ ಬೃಹತ್ ವಾಕಥಾನ್‌ನಲ್ಲಿ ಪಾಲ್ಗೊಂಡವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.