ADVERTISEMENT

Factcheck: ಎಎಪಿ ಅಧಿಕಾರಕ್ಕೆ ಬಂದ ಬಳಿಕ ಖಾಲಿಸ್ತಾನಕ್ಕೆ ಮರುಜೀವ?

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 22:26 IST
Last Updated 14 ಮಾರ್ಚ್ 2022, 22:26 IST
   

ಟರ್ಬನ್ ಸುತ್ತಿಕೊಂಡು ಕೈಯಲ್ಲಿ ಸಿಖ್ ಧ್ವಜ ಹಿಡಿದ ಕೆಲವರು ‘ಖಾಲಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಜಯ ಗಳಿಸಿದ ಬಳಿಕ ರಾಜ್ಯದಲ್ಲಿ ಖಾಲಿಸ್ತಾನ್‌ ಚಳವಳಿಗೆ ಮರುಜೀವ ಸಿಕ್ಕಿದೆ ಎಂಬ ಅರ್ಥದಲ್ಲಿ ಚರ್ಚೆಗಳು ಶುರುವಾಗಿವೆ. ‘ಎಎಪಿ ಗೆಲುವಿನೊಂದಿಗೆ ರಾಜ್ಯದಲ್ಲಿ ಬದಲಾವಣೆ ಶುರುವಾಗಿದೆ’ ಎಂದು ಕೆಲವರು ಉಲ್ಲೇಖಿಸಿದ್ದಾರೆ.

ಪಂಜಾಬ್ ಚುನಾವಣೆಗೂ, ಈ ವಿಡಿಯೊಗೂ ಸಂಬಂಧವಿಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ ಚೆಕ್ ವೆಬ್‌ಸೈಟ್ ತಿಳಿಸಿದೆ. ಕೆಂಪುಕೋಟೆ ಮೇಲೆ ಧ್ವಜ ಹಾರಿಸಿ ಸುದ್ದಿಯಾಗಿದ್ದ ಹಾಗೂ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ದೀಪ್ ಸಿಧು ನೆನಪಿನಲ್ಲಿ ಭಟಿಂಡಾದಲ್ಲಿ ನಡೆದ ಮೆರವಣಿಗೆಯಲ್ಲಿ ಖಾಲಿಸ್ತಾನ್ ಪರ ಘೋಷಣೆ ಕೂಗಲಾಗಿತ್ತು. ಈ ವಿಡಿಯೊ ಫೆ.22ರಂದು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆಗಿದೆ. ಪಂಜಾಬ್ ಫಲಿತಾಂಶ ಪ್ರಕಟವಾಗಿದ್ದು ಮಾರ್ಚ್ 10ರಂದು ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT