ಮೃಗಾಲಯವೊಂದರಲ್ಲಿ ಗೊರಿಲ್ಲಾವು ಮಗುವೊಂದನ್ನು ಅದರ ತಾಯಿಗೆ ಹಸ್ತಾಂತರಿಸುತ್ತಿರುವ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ‘ಬ್ರಾಂಕ್ಸ್ ಮೃಗಾಲಯದಲ್ಲಿ ಗೊರಿಲ್ಲಾ ಇದ್ದ ಪ್ರದೇಶದಲ್ಲಿ ಓಡಾಡುತ್ತಿದ್ದ ಮಗುವನ್ನು ಗೊರಿಲ್ಲಾವೊಂದು ಎತ್ತಿ ತಾಯಿಗೆ ಹಸ್ತಾಂತರಿಸಿತು. ಇಲ್ಲದಿದ್ದರೆ, ಅಲ್ಲಿನ ಪರಿಸ್ಥಿತಿ ತೀರಾ ಹದಗೆಡುತ್ತಿತ್ತು’ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ, ಇದು ಸುಳ್ಳು. ಅದು ನಿಜವಾದ ವಿಡಿಯೊವಲ್ಲ.
ವಿಡಿಯೊದ ಕೀ ಫ್ರೇಮ್ ಒಂದನ್ನು ರಿವರ್ಸ್ ಇಮೇಜ್ ವಿಧಾನದಲ್ಲಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಎಐ ವಿಡಿಯೊಸ್ (@AI-Videos-Arg) ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವಿಡಿಯೊ ಪ್ರಕಟವಾಗಿರುವುದು ಕಂಡು ಬಂತು. ಆ ಚಾನೆಲ್‌ನಲ್ಲಿನ ಇತರ ವಿಡಿಯೊಗಳನ್ನು ಪರಿಶೀಲನೆಗೆ ಒಳಪಡಿಸಿದಾಗ, ಅದರಲ್ಲಿನ ಬಹುತೇಕ ವಿಡಿಯೊಗಳು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಸೃಷ್ಟಿಸಿದ ವಿಡಿಯೊಗಳು ಎಂಬುದು ಕಂಡು ಬಂತು. ವಿಡಿಯೊವನ್ನು ಎಐ ಪತ್ತೆ ಹಚ್ಚುವ ಹೈವ್ ಮಾಡರೇಷನ್ ಟೂಲ್‌ನಲ್ಲಿ ಹಾಕಿದಾದ, ಅದು ಎಐ ವಿಡಿಯೊ ಎಂಬುದು ದೃಢಪಟ್ಟಿತು ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.