ADVERTISEMENT

ಸೇನಾಪಡೆ ಮುಖ್ಯಸ್ಥ ನರವಣೆ, ಹರೀಂದರ್ ಸಿಂಗ್ ವಜಾಗೊಳಿಸಲು ಪ್ರಧಾನಿಗೆ ಪತ್ರ?

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:19 IST
Last Updated 14 ಜುಲೈ 2020, 17:19 IST
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪತ್ರದ ಕುರಿತು ಪಿಐಬಿ ಮಾಡಿರುವ ಫ್ಯಾಕ್ಟ್‌ಚೆಕ್‌
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪತ್ರದ ಕುರಿತು ಪಿಐಬಿ ಮಾಡಿರುವ ಫ್ಯಾಕ್ಟ್‌ಚೆಕ್‌   

‘ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಗಡಿ ಪರಿಸ್ಥಿತಿ ನಿಭಾಯಿಸುವಲ್ಲಿ ಸೇನಾಪಡೆ ಮುಖ್ಯಸ್ಥ ನರವಣೆ ಹಾಗೂ 14 ಕೋರ್‌ನ ಕಮಾಂಡರ್ ಹರೀಂದರ್ ಸಿಂಗ್ ಅವರು ಎಡವಿದ್ದಾರೆ ಎಂದು ಸಿಎಸ್‌ಡಿ ಬಿಪಿನ್ ರಾವತ್ ಅವರು ತನಿಖಾ ವರದಿ ಉಲ್ಲೇಖಿಸಿ ಅಭಿಪ್ರಾಯಪಟ್ಟಿದ್ದಾರೆ. ಇಬ್ಬರನ್ನೂ ವಜಾಗೊಳಿಸುವಂತೆ ರಾವತ್ ಶಿಫಾರಸು ಮಾಡಿದ್ದಾರೆ’ – ಈ ಉಲ್ಲೇಖವಿರುವ ಪತ್ರವೊಂದನ್ನುರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದಾರೆ ಎನ್ನಲಾಗಿದ್ದು, ಅದು ಟ್ವಿಟರ್‌ನಲ್ಲಿ ಚರ್ಚೆಯಾಗುತ್ತಿದೆ. ಮಾಧವ್ ಶರ್ಮಾ ಎಂಬುವರು ಟ್ವಿಟರ್‌ನಲ್ಲಿ ಪತ್ರವನ್ನು ಹಂಚಿಕೊಂಡಿದ್ದು, ಬಿಪಿನ್ ರಾವತ್ ವಿರುದ್ಧ ಕಿಡಿಕಾರಿದ್ದಾರೆ. ರಾವತ್ ಅವರು ದ್ವೇಷದ ಮನಸ್ಥಿತಿ ಹೊಂದಿದ್ದಾರೆ ಎಂದು ದೂರಿದ್ದಾರೆ.

ಇಂತಹ ಪತ್ರವನ್ನು ರಾಜನಾಥ್ ಸಿಂಗ್ ಅವರು ಪ್ರಧಾನಿ ಅವರಿಗೆ ಬರೆದಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವ ಕಿಡಿಗೇಡಿಗಳ ಬಗ್ಗೆ ಎಚ್ಚರದಿಂದಿರಿ ಎಂದೂ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT