ADVERTISEMENT

ಮಳೆ, ಪ್ರವಾಹ: ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿರುವ ಚಿತ್ರ ಈ ವರ್ಷದ್ದೇ?

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 19:48 IST
Last Updated 22 ಜುಲೈ 2020, 19:48 IST
ಫ್ಯಾಕ್ಟ್ ಚೆಕ್
ಫ್ಯಾಕ್ಟ್ ಚೆಕ್   

ಮಳೆ ಹಾಗೂ ಪ್ರವಾಹದಿಂದ ಉತ್ತರ ಭಾರತ ಹಾಗೂ ಈಶಾನ್ಯ ಭಾರತದಲ್ಲಿ ಭಾರಿ ಹಾನಿ ಸಂಭವಿಸಿದೆ. ಅಸ್ಸಾಂ, ಬಿಹಾರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮಳೆ ಸಂಬಂಧಿ ಅವಘಡಗಳಿಂದ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಪ್ರವಾಹದಿಂದ ಜನರು ಸಂಕಷ್ಟಕ್ಕೀಡಾದ ಚಿತ್ರಗಳನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವಂತೆ ಅವರು ಪಕ್ಷದ ಕಾರ್ಯಕರ್ತರನ್ನು ಕೋರಿದ್ದಾರೆ.

ಉತ್ತರ ಹಾಗೂ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಬಂದು, ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಆದರೆ, ಪ್ರಿಯಾಂಕಾ ಅವರು ಹಂಚಿಕೊಂಡಿರುವ ಚಿತ್ರಗಳು ಈ ಬಾರಿಯ ಪ್ರವಾಹಕ್ಕೆ ಸಂಬಂಧಿಸಿದ್ದಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಅಸ್ಸಾಂ ಪ್ರವಾಹದ ಸನ್ನಿವೇಶದ ಮೊದಲ ಚಿತ್ರವನ್ನು 2019ರ ಜುಲೈ 18–19ರಂದು ಡಿಎನ್‌ಎ, ಡೌನ್‌ ಟು ಅರ್ಥ್‌, ನಾರ್ತ್‌ ಈಸ್ಟ್‌ ಟುಡೆ ಮೊದಲಾದ ಪತ್ರಿಕೆಗಳು ಹಾಗೂ ಜಾಲತಾಣಗಳು ಪ್ರಕಟಿಸಿದ್ದವು.2017ರ ಬಿಹಾರ ಪ್ರವಾಹದ ಸಂದರ್ಭದಲ್ಲಿ ತೆಗೆಯಲಾಗಿದ್ದ ಇನ್ನೊಂದು ಚಿತ್ರವು ಹಿಂದೂಸ್ತಾನ್‌ ಟೈಮ್ಸ್‌ನಲ್ಲಿ 2017ರ ಆಗಸ್ಟ್‌ 16ರಂದು ಪ್ರಕಟವಾಗಿತ್ತು. ಅದೇ ಚಿತ್ರಗಳನ್ನು ಅವರು ಈ ಬಾರಿಯ ಚಿತ್ರಗಳೆಂಬಂತೆ ಹಂಚಿಕೊಂಡಿದ್ದಾರೆ ಎಂದು ಮೂಲವನ್ನು ಪರಿಶೀಲಿಸಿದ ಆ ಸುದ್ದಿ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT