ADVERTISEMENT

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣ ಚರ್ಚೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 19:31 IST
Last Updated 21 ನವೆಂಬರ್ 2022, 19:31 IST
ರಾಹುಲ್‌
ರಾಹುಲ್‌   

ಭಾರತ್ ಜೋಡೊ ಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದಾರೆ ಎನ್ನಲಾದ ಭಾಷಣದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ. ‘ನನಗೆ ಅಧಿಕಾರ ಬೇಕು. ಸತ್ಯದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಕುರ್ಚಿ ಮಾತ್ರ ಮುಖ್ಯ’ ಎಂದು ಅವರು ಹೇಳುತ್ತಿದ್ದಾರೆ ಎನ್ನಲಾದ ದೃಶ್ಯವು ಈ ವಿಡಿಯೊದಲ್ಲಿದೆ. ಹಲವುಜನರು ಈ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದು, ರಾಹುಲ್ ಮಾತುಗಳನ್ನು ಕೇಳಿ ಎಂದು ಉಲ್ಲೇಖಿಸಿದ್ದಾರೆ.

ರಾಹುಲ್ ಅವರು 2021ರ ಡಿಸೆಂಬರ್ 13ರಂದು ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ಮಾಡಿದ್ದ ಭಾಷಣದ ವಿಡಿಯೊ ಇದಾಗಿದ್ದು, ಅವರು ಬಿಜೆಪಿಯನ್ನು ಉದ್ದೇಶಿಸಿ ಹೇಳಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ‘ಇಂಡಿಯಾಟುಡೇ‘ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ‘ಹಿಂದುತ್ವವಾದಿಗಳಿಗೆ ಏನೇ ಆಗಲಿ ಅಧಿಕಾರವೊಂದೇ ಬೇಕು. ಮಹಾತ್ಮಾ ಗಾಂಧಿ ಅವರು ‘ನನಗೆ ಸತ್ಯ ಬೇಕು. ನಾನು ಅದನ್ನು ಬಯಸುತ್ತೇನೆ. ನನಗೆ ಅಧಿಕಾರ ಬೇಕಿಲ್ಲ’ ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಗಾಂಧೀಜಿ ಮಾತಿಗೆ ತದ್ವಿರುದ್ಧವಾಗಿ ಮಾತನಾಡುತ್ತಿದ್ದು, ‘ನನಗೆ ಅಧಿಕಾರ ಬೇಕು, ಸತ್ಯದ ಗೊಡವೆ ಬೇಕಿಲ್ಲ’ ಎಂದು ಹೇಳುತ್ತಿದ್ದಾರೆ’ ಎಂಬುದಾಗಿ ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದರು. ಬಿಜೆಪಿಯನ್ನು ಉಲ್ಲೇಖಿಸಿ ಹೇಳಿದ್ದ ಮಾತುಗಳನ್ನುರಾಹುಲ್ ತಮ್ಮ ಬಗ್ಗೆಯೇ ಆಡಿರುವ ಮಾತು ಎಂಬುದಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT