ADVERTISEMENT

ಫ್ಯಾಕ್ಟ್‌ಚೆಕ್: ರೈಲ್ವೆ ನೌಕರರ ಪ್ರಯಾಣ ಭತ್ಯೆ ಶೇ 50ರಷ್ಟು ಕಡಿತ!

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 21:12 IST
Last Updated 25 ನವೆಂಬರ್ 2020, 21:12 IST
   

ರೈಲ್ವೆ ಸಚಿವಾಲಯವುಕೋವಿಡ್ ಕಾರಣದಿಂದಾಗಿ ಪೂರ್ಣ ಪ್ರಮಾಣದಲ್ಲಿ ರೈಲುಗಳನ್ನು ಓಡಿಸುತ್ತಿಲ್ಲ. ಹೀಗಾಗಿ ಸಚಿವಾಲಯದ ಆದಾಯಕ್ಕೆ ಕತ್ತರಿ ಬಿದ್ದಿದೆ. ಅದನ್ನು ಸರಿದೂಗಿಸುವ ಉದ್ದೇಶದಿಂದ ರೈಲ್ವೆ ನೌಕರರ ಪ್ರಯಾಣ ಭತ್ಯೆಯಲ್ಲಿ (ಟಿಎ) ಶೇ 50ರಷ್ಟು ಕಡಿತ ಮಾಡಲಿದೆ. ಒಟಿ (ಓವರ್‌ಟೈಮ್) ಸೌಲಭ್ಯವನ್ನು ಹಿಂತೆಗೆದುಕೊಳ್ಳಲಾಗಿದ್ದು, ಸುಮಾರು 13 ಲಕ್ಷ ನೌಕರರಿಗೆ ಇದು ಅನ್ವಯವಾಗಲಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ ತಿಳಿಸಿದೆ. ಸಚಿವಾಲಯವು ಒಟಿ ಹಾಗೂ ಟಿಎ ಕಡಿತಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT