
ಫ್ಯಾಕ್ಟ್ ಚೆಕ್
‘ಸಂವಿಧಾನವು ಹಿಂದೂ ವಿರೋಧಿಯಾಗಿದೆ. ಸಂವಿಧಾನದ 30ನೇ ವಿಧಿಯು ಮದರಸಗಳಲ್ಲಿ ಕುರ್–ಆನ್ ಅನ್ನು ಬೋಧಿಸಲು ಅವಕಾಶ ಮಾಡಿಕೊಡುತ್ತದೆ. ಆದರೆ ಸಂವಿಧಾನದ 30ಎ ವಿಧಿಯು ಶಾಲೆಗಳಲ್ಲಿ ಭಗವದ್ಗೀತೆ ಬೋಧನೆಯನ್ನು ನಿಷೇಧಿಸುತ್ತದೆ. ಹೀಗೆ ಹಿಂದೂಗಳಿಗೆ ಸಂವಿಧಾನದ 30 ಮತ್ತು 30ಎ ವಿಧಿಯು ಅನ್ಯಾಯ ಮಾಡುತ್ತಿದೆ’ ಎಂಬ ವಿವರ ಇರುವ ಸಂದೇಶ ಮತ್ತು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ.
ಸಂವಿಧಾನದ 30ನೇ ವಿಧಿಯು ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತ ಸಮುದಾಯಗಳು ತಮ್ಮದೇ ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಡುತ್ತದೆ. ಜತೆಗೆ ಅಂತಹ ಶೈಕ್ಷಣಿಕ ಸಂಸ್ಥೆಗಳ ಆಡಳಿತ ನಡೆಸಲೂ ಅವಕಾಶ ಮಾಡಿಕೊಡುತ್ತದೆ. ಈ ವಿಧಿಯ ಮೂರು ಉಪವಿಧಿಗಳಲ್ಲಿ ಇದನ್ನು ವಿವರಿಸಲಾಗಿದೆ. ಇಲ್ಲಿ ಎಲ್ಲಿಯೂ ಮದರಸಗಳಲ್ಲಿ ಕುರ್–ಆನ್ ಅನ್ನು ಬೋಧಿಸಿ ಎಂದು ಹೇಳಿಲ್ಲ. ಜತೆಗೆ ಸಂವಿಧಾನದಲ್ಲಿ 30ಎ ವಿಧಿಯೇ ಇಲ್ಲ. ಹೀಗಾಗಿ ಇಂತಹ ಪೋಸ್ಟರ್‌ಗಳಲ್ಲಿ ಹಂಚಿಕೊಂಡಿರುವ ಮಾಹಿತಿ ಸುಳ್ಳು ಎಂದು ಫ್ಯಾಕ್ಟ್‌ಲೀ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಸಂವಿಧಾನದ 30ನೇ ವಿಧಿಯನ್ನು ಪರಿಶೀಲಿಸಿ, ಪೋಸ್ಟರ್‌ನಲ್ಲಿ ಇರುವ ಮಾಹಿತಿ ಸುಳ್ಳು ಎಂಬುದನ್ನು ದೃಢಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.