ADVERTISEMENT

ಫ್ಯಾಕ್ಟ್ ಚೆಕ್ | ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದ ಹುಡುಗಿಯ ಕೊಲೆ?

ಪ್ರಜಾವಾಣಿ ವಿಶೇಷ
Published 17 ಫೆಬ್ರುವರಿ 2022, 20:37 IST
Last Updated 17 ಫೆಬ್ರುವರಿ 2022, 20:37 IST
   

ಸುಳ್ಳು:

ಹುಡುಗನೊಬ್ಬ ಹುಡುಗಿಯ ಕತ್ತನ್ನು ಸೀಳಿ ಸಾಯಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದ ಹುಡುಗಿಯನ್ನು ಸಾಯಿಸಲಾಗಿದೆ ಎಂದು ವಿಡಿಯೊ ಹಂಚಿಕೊಂಡ ಕೆಲವರು ಉಲ್ಲೇಖಿಸಿದ್ದಾರೆ. ಸೂರತ್‌ನಲ್ಲಿ ಈ ಘಟನೆ ನಡೆದಿದ್ದು, ಲವ್ ಜಿಹಾದ್‌ಗೆ ತಾಜಾ ಉದಾಹರಣೆ ಎಂದು ಕೆಲವರು ಹೇಳಿದ್ದಾರೆ. ಹಿಂದೂಗಲೇ ಎಚ್ಚೆತ್ತುಕೊಳ್ಳಿ ಎಂದು ಜಾಲತಾಣ ಬಳಕೆದಾರರು ಹೇಳಿದ್ದಾರೆ.

ಸತ್ಯ:

ಈ ಘಟನೆ ಸೂರತ್‌ನಲ್ಲಿ ನಡೆದಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಉಲ್ಲೇಖವಾಗಿರುವಂತೆ ಮತಾಂತರಕ್ಕೆ ಸಂಬಂಧಪಟ್ಟಿಲ್ಲ ಎಂದು ಆಲ್ಟ್‌ನ್ಯೂಸ್ ಹಾಗೂ ಲಾಜಿಕಲ್ ಇಂಡಿಯನ್ ವೆಬ್‌ಸೈಟ್‌ ತಿಳಿಸಿವೆ. ಹುಡುಗಿಯ ಜೊತೆಯಲ್ಲಿರಲು ಆಕೆಯ ಮನೆಯವರು ವಿರೋಧಿಸಿದ್ದರಿಂದ ಸಿಟ್ಟಿಗೆದ್ದ ಹುಡುಗ, ಯುವತಿಯ ಕತ್ತುಸೀಳಿ ತಾನೂ ವಿಷ ಕುಡಿದಿದ್ದಾನೆ ಎಂದು ಪೊಲೀಸ್‌ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ಈ ಇಬ್ಬರಲ್ಲಿ ಯಾರೂ ಮುಸ್ಲಿಮರಲ್ಲ ಎಂದು ವೆಬ್‌ಸೈಟ್ ಸ್ಪಷ್ಟಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.