ಚೀನಾದ ಸೈನಿಕರು ಭಾರತದ ಸೈನಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಮನದೀಪ್ ಸಿಂಗ್ ಬ್ರಾರ್ ಎಂಬುವವರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿರುವ ಹಲವು ಸೈನಿಕರು ಒದ್ದಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ‘ಚೀನಿಯರ ಈ ಕೃತ್ಯವನ್ನು ನೋಡಿದರೆ ನನ್ನ ರಕ್ತ ಕುದಿಯುತ್ತದೆ’ ಎಂದು ಮನದೀಪ್ ಕಿಡಿಕಾರಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ, ಇದು ಸುಳ್ಳು ಸುದ್ದಿ. ಈ ವಿಡಿಯೊ 2019ರ ಅಕ್ಟೋಬರ್ 30ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದೆ. ಮೇಘಾಲಯದ ದುರ್ಗಮ ಪ್ರದೇಶದಿಂದ ಹಿಂತಿರುಗುತ್ತಿದ್ದಾಗ ಬಸ್ ಕಂದಕಕ್ಕೆ ಉರುಳಿಬಿದ್ದು, ಅದರಲ್ಲಿದ್ದ ಬಿಎಸ್‌ಎಫ್ ಯೋಧರು ಗಾಯಗೊಂಡಿದ್ದರು. ಆ ವಿಡಿಯೊವನ್ನು ಮನದೀಪ್ ಅವರು ಚೀನಿ ಸೈನಿಕರ ದಾಳಿ ಎಂದು ತಪ್ಪಾಗಿ ಪೋಸ್ಟ್ ಮಾಡಿದ್ದಾರೆ. ಮೇಘಾಲಯದ ಬಿಎಸ್‌ಎಫ್ ಘಟಕದ ಮುಖ್ಯಸ್ಥರೂ, ಇದು ಅಪಘಾತದ ವಿಡಿಯೊ ಎಂದು ದೃಢಪಡಿಸಿದ್ದಾರೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.