ಇತ್ತೀಚೆಗೆ ಮಣಿಪುರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಲ್ ವಿಪ್ಲವ್ ತ್ರಿಪಾಠಿ, ಅವರ ಪತ್ನಿ ಹಾಗೂ ಮಗು ಮೃತಪಟ್ಟಿದ್ದರು. ಇದು ಇತ್ತೀಚಿನ ದಿನಗಳಲ್ಲಿ ನಡೆದ ಭೀಕರ ಉಗ್ರ ದಾಳಿಗಳಲ್ಲಿ ಒಂದು. ಈ ದಾಳಿಗೆ ಸಂಬಂಧಿಸಿದ ಎರಡು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಒಂದು ಚಿತ್ರದಲ್ಲಿ ಸೇನಾ ಬೆಂಗಾವಲು ವಾಹನವು ಸುಟ್ಟಿರುವ ಚಿತ್ರಣವಿದೆ. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರದ ಕೊಂಬೆಗಳನ್ನು ಸೇನಾ ಸಿಬ್ಬಂದಿ ತೆರವುಗೊಳಿಸುವ ಮತ್ತೊಂದು ಚಿತ್ರದ ಜೊತೆಗೆ ಮೃತ ಕರ್ನಲ್ ಹಾಗೂ ಅವರ ಪತ್ನಿ ಮಗು ಇರುವ ಚಿತ್ರವನ್ನು ಕೊಲಾಜ್ ಮಾಡಲಾಗಿದೆ.
ಈ ಎರಡೂ ಚಿತ್ರಗಳು ಮಣಿಪುರದಲ್ಲಿ ಇತ್ತೀಚೆಗೆ ನಡೆದ ದಾಳಿಗೆ ಸಂಬಂಧಿಸಿಲ್ಲ ಎಂದು ಇಂಡಿಯಾಟುಡೇ ವರದಿ ಮಾಡಿದೆ. 2015ರಲ್ಲಿ ಮಣಿಪುರದ ಚಾಂದೇಲ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸೇನಾ ಬಸ್ ಸುಡಲಾಗಿತ್ತು. ಈ ಘಟನೆಯಲ್ಲಿ 18 ಸೈನಿಕರು ಹುತಾತ್ಮರಾಗಿದ್ದರು. ಎರಡನೇ ಚಿತ್ರವು 2014ರಿಂದಲೂ ರಾಯಿಟರ್ಸ್ ಸುದ್ದಿ ಸಂಸ್ಥೆಯ ತಾಣದಲ್ಲಿದೆ.ರಾಯಿಟರ್ಸ್ ಪ್ರಕಾರ, ಅಸ್ಸಾಂ ಮತ್ತು ನಾಗಾಲ್ಯಾಂಡ್‌ನ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ವೇಳೆ ಈ ಚಿತ್ರವನ್ನು ಸೆರೆಹಿಡಿಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.