ADVERTISEMENT

fact check: ರಸ್ತೆ ಬದಿ ರಾತ್ರಿ ಕಳೆದರೇ ಟಿಇಟಿ ಪರೀಕ್ಷಾರ್ಥಿಗಳು?

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 19:30 IST
Last Updated 30 ನವೆಂಬರ್ 2021, 19:30 IST
ವೈರಲ್‌ ಆಗಿರುವ ಚಿತ್ರ
ವೈರಲ್‌ ಆಗಿರುವ ಚಿತ್ರ   


ಉತ್ತರ ಪ್ರದೇಶದಲ್ಲಿ ಕಳೆದ ಭಾನುವಾರ ನಿಗದಿಯಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯು ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದಕ್ಕೆ ರದ್ದುಗೊಂಡಿತ್ತು. ಈ ಮಾಹಿತಿ ಇಲ್ಲದೇ, ಪರೀಕ್ಷೆ ಬರೆಯಲು ಹಿಂದಿನ ದಿನ ಲಖನೌಗೆ ಬಂದಿದ್ದ ವಿದ್ಯಾರ್ಥಿಗಳು ರಸ್ತೆಬದಿ ಮಲಗಿ ರಾತ್ರಿ ಕಳೆದಿದ್ದರು. ವಿದ್ಯಾರ್ಥಿಗಳು ಕೊರೆಯುವ ಚಳಿಯಲ್ಲಿ ರಸ್ತೆ ಬದಿ ಮಲಗಿರುವ ಚಿತ್ರ ವೈರಲ್ ಆಗಿದೆ. ಟ್ವಿಟರ್‌ ಹಾಗೂ ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರ ರಾಜಸ್ಥಾನಕ್ಕೆ ಸಂಬಂಧಿಸಿದ್ದು ಎಂದು ಆಲ್ಟ್‌ ನ್ಯೂಸ್ ಹಾಗೂ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆಗಳು ಸ್ಪಷ್ಟಪಡಿಸಿವೆ. ನೇಮಕಾತಿಗೆ ಆಗ್ರಹಿಸಿ 45 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರಾಜಸ್ಥಾನದ ನಿರುದ್ಯೋಗಿಗಳು ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಲು ಲಖನೌಗೆ ಬಂದಿದ್ದ ಚಿತ್ರ ಇದು. ಆದರೆ ಈ ಚಿತ್ರವು ಟಿಇಟಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಬಿಂಬಿತವಾಗಿದೆ. ಪರೀಕ್ಷೆ ಕುರಿತಂತೆ ದಾರಿತಪ್ಪಿಸುವ ಸುದ್ದಿ, ಮಾಹಿತಿ ಹಂಚಿಕೊಂಡ ಪ್ರಿನ್ಸ್ ಯಾದವ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT