ADVERTISEMENT

ಫ್ಯಾಕ್ಟ್ ಚೆಕ್: ಮಹಿಳೆಯರು ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರೇ?

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 17:12 IST
Last Updated 28 ಮಾರ್ಚ್ 2021, 17:12 IST
ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರರು ಎಂಬುದಾಗಿ ವೈರಲ್ ಆಗಿರುವ ಚಿತ್ರ
ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರರು ಎಂಬುದಾಗಿ ವೈರಲ್ ಆಗಿರುವ ಚಿತ್ರ   

ಬಾಂಗ್ಲಾದೇಶ ಹಾಗೂ ಭಾರತದಲ್ಲಿ ಏಕಕಾಲಕ್ಕೆ ಎರಡು ಚಿತ್ರಗಳು ವೈರಲ್ ಆಗಿವೆ. ಕಪ್ಪು ಬಿಳುಪು ಚಿತ್ರದಲ್ಲಿರುವ ಮಹಿಳೆಯರೇ 50 ವರ್ಷಗಳ ಬಳಿಕ ಮತ್ತೊಂದು ಚಿತ್ರದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ.

ಈ ಮಹಿಳೆಯರು ಬಾಂಗ್ಲಾ ವಿಮೋಜನೆ ಹೋರಾಟದಲ್ಲಿ ಭಾಗಿಯಾಗಿದ್ದರು ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಇವರು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರ ಆಗಿದ್ದಾರೆ ಎಂದು ಹಲವರು ಉಲ್ಲೇಖಿಸಿದ್ದಾರೆ.

ವೈರಲ್ ಫೋಟೊ ಬಗ್ಗೆ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ತಂಡವು ಪರಿಶೀಲನೆ ನಡೆಸಿದೆ. ಇವರು ಸ್ವಾತಂತ್ರ್ಯ ಹೋರಾಟಗಾರರಲ್ಲ. ಇವರು ಹುಟ್ಟಿರುವುದೇ ಇಸ್ಲಾಂ ಧರ್ಮೀಯರಾಗಿ ಎಂದು ಬಾಂಗ್ಲಾದೇಶದ ಪತ್ರಕರ್ತರೊಬ್ಬರು ಸ್ಪಷ್ಟಪಡಿಸಿದ್ದಾರೆ. ಹ‌ಳ್ಳಿಗಳ ಭೇಟಿಗೆ ತೆರಳಿದ್ದಾಗ ಈ ಚಿತ್ರವನ್ನು ಸೆರೆಹಿಡಿಯಲಾಗಿತ್ತು ಎಂದು ಬಾಂಗ್ಲಾದೇಶದ ಅಫ್ರಿನಾ ಎಂಬುವರು ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.