ADVERTISEMENT

ಫ್ಯಾಕ್ಟ್ ಚೆಕ್: ಮಹಿಳಾ ನಕ್ಸಲರು ಅಡುಗೆ ಮಾಡುತ್ತಿರುವುದು ನಿಜವೇ?

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 19:30 IST
Last Updated 7 ಏಪ್ರಿಲ್ 2021, 19:30 IST
ನಕ್ಸಲ್ ಶಿಬಿರದ ಚಿತ್ರಣ ಎಂಬುದಾಗಿ ವೈರಲ್ ಆಗಿರುವ ಚಿತ್ರಗಳು
ನಕ್ಸಲ್ ಶಿಬಿರದ ಚಿತ್ರಣ ಎಂಬುದಾಗಿ ವೈರಲ್ ಆಗಿರುವ ಚಿತ್ರಗಳು   

ಛತ್ತೀಸಗಡದಲ್ಲಿ ಇತ್ತೀಚೆಗೆ ನಡೆದ ನಕ್ಸಲೀಯರ ದಾಳಿ ಬೆನ್ನಲ್ಲೇ, ನಕ್ಸಲೀಯರು ಅರಣ್ಯದಲ್ಲಿ ವಾಸಿಸುತ್ತಿರುವ ಚಿತ್ರಗಳು ವೈರಲ್ ಆಗಿವೆ. ದಿನಪತ್ರಿಕೆಯೊಂದು ವಿಡಿಯೊ ಹಾಗೂ ಚಿತ್ರಗಳನ್ನು ಪ್ರಕಟಿಸಿದೆ. ಮಹಿಳಾ ನಕ್ಸಲರು ಅಡುಗೆ ಮಾಡುತ್ತಿರುವ, ನಕ್ಸಲರ ಗುಂಪು ಕುರ್ಚಿಯಲ್ಲಿ ಕುಳಿತು ನಗುತ್ತಿರುವ, ವಿಜಯದ ಸಂಕೇತ ತೋರುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿವೆ.

ಆಲ್ಟ್ ನ್ಯೂಸ್ ನಡೆಸಿದ ಪರಾಮರ್ಶೆಯಲ್ಲಿ ಈ ಚಿತ್ರಗಳು ಸಿನಿಮಾ ಚಿತ್ರೀಕರಣ ಸೆಟ್‌ಗೆ ಸಂಬಂಧಿಸಿದವು ಎಂಬುದು ತಿಳಿದು ಬಂದಿದೆ. ಸಿನಿಮಾ ಶೂಟಿಂಗ್‌ಗೆ ಬಳಸುವ ಕ್ಯಾಮರಾ ಇರುವ ಚಿತ್ರ ಸಹ ಇದರಲ್ಲಿ ಇದೆ. ಸಾಮಾಜಿಕ ಜಾಲತಾಣ ಬಳಕೆದಾರರೂ ಇದನ್ನು ಉಲ್ಲೇಖಿಸಿದ್ದಾರೆ. ಬಸ್ತಾರ್‌ನ ಪತ್ರಕರ್ತ ಅಶು ತಿವಾರಿ ಅವರೂ ಸಹ ಇದನ್ನು ಖಚಿತಪಡಿಸಿದ್ದಾರೆ. ಈ ಚಿತ್ರಗಳಿಗೂ ಛತ್ತೀಸ್‌ಗಡದ ನಕ್ಸಲ್ ಶಿಬಿರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT