ADVERTISEMENT

Fact Check| ರಸ್ತೆಗಾಗಿ ದೇವಸ್ಥಾನ ಕೆಡವಿ ಮಸೀದಿ ಉಳಿಸಿತೇ ಆಂಧ್ರ ಸರ್ಕಾರ?

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 19:30 IST
Last Updated 30 ಮಾರ್ಚ್ 2022, 19:30 IST
ಫ್ಯಾಕ್ಟ್‌ ಚೆಕ್‌
ಫ್ಯಾಕ್ಟ್‌ ಚೆಕ್‌   

ಹಳೆಯ ದೇವಸ್ಥಾನವೊಂದನ್ನು ಜೆಸಿಬಿ ಬಳಸಿ ಕೆಡವುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಸೆರೆಯಾಗಿರುವ ದೃಶ್ಯ ಇದು ಎಂದು ಹೇಳಲಾಗಿದೆ.ವಿಡಿಯೊದಲ್ಲಿ ಮಸೀದಿ ಕೂಡಾ ಕಾಣುತ್ತದೆ. ‘ಆಂಧ್ರ ಪ್ರದೇಶ ಸರ್ಕಾರವು ರಸ್ತೆ ಅಗಲೀಕರಣಕ್ಕಾಗಿ ಪ್ರಾಚೀನ ಹಿಂದೂ ದೇವಾಲಯವನ್ನು ನೆಲಸಮ ಮಾಡುತ್ತಿದೆ. ಆದರೆ ಮಸೀದಿಯನ್ನು ಹಾಗೇ ಬಿಟ್ಟಿದೆ’ ಎಂದು ಈ ವಿಡಿಯೊದಲ್ಲಿ ಬಿಂಬಿಸಲಾಗಿದೆ. ಹಿಂದೂಪರ ಸಂಘಟನೆಗಳು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಾರಿ ಹಂಚಿಕೊಂಡಿವೆ.

2020ರ ಮೇ ತಿಂಗಳಿನಲ್ಲಿ ಚಿತ್ರೀಕರಿಸಲಾದ ಈ ವಿಡಿಯೊವನ್ನು ತಪ್ಪು ಮಾಹಿತಿಯ ಜೊತೆಗೆ ಈಗ ಹಂಚಿಕೊಳ್ಳಲಾಗುತ್ತಿದೆಎಂದು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಶ್ರೀ ವಿಜಯೇಶ್ವರ ಸ್ವಾಮಿ ವಾರಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯ ವೇಳೆ ಜೆಸಿಬಿ ಯಂತ್ರ ಬಳಸಲಾಗಿತ್ತು. ದೇವಸ್ಥಾನದ ಒಳಾಂಗಣವನ್ನು ಮಾತ್ರ ವಿಸ್ತರಿಸಲಾಗಿದೆ. ದೇವಸ್ಥಾನಈಗಲೂ ಅದೇ ಜಾಗದಲ್ಲಿದೆ. ದೇವಸ್ಥಾನದ ಎದುರಿದ್ದ ಮಸೀದಿ ಕೂಡಾ ಅಲ್ಲಿಯೇ ಇದೆ ಎಂದು ವಿಜಯವಾಡ ಪೊಲೀಸರು ದೃಢಪಡಿಸಿದ್ದಾರೆ ಎಂದು ಆಲ್ಟ್‌ ನ್ಯೂಸ್‌ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT