ADVERTISEMENT

Fact Check| ಮೋದಿ ಸರ್ಕಾರ ನಿರುದ್ಯೋಗ ಭತ್ಯೆ ನೀಡಲಿದೆ ಎಂಬುದು ನಿಜವೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2021, 19:30 IST
Last Updated 28 ಜನವರಿ 2021, 19:30 IST
   

‘ಸರ್ಕಾರ ಒಂದೇ. ಲಾಭ ಮಾತ್ರ ಅನೇಕ. ನಿರುದ್ಯೋಗಿ ಯುವಕರಿಗೆ ಕೇಂದ್ರದ ಮೋದಿ ಸರ್ಕಾರದಿಂದ ಅನನ್ಯ ಯೋಜನೆ ಘೋಷಣೆಯಾಗಿದೆ. 18ರಿಂದ 50 ವರ್ಷದ ನಿರುದ್ಯೋಗಿಗಳಿಗೆ ‘ನಿರುದ್ಯೋಗ ಭತ್ಯೆ’ ನೀಡುವ ಯೋಜನೆಯನ್ನು ಕೇಂದ್ರ ಜಾರಿಗೆ ತಂದಿದೆ. ವಯಸ್ಸಿನ ಪ್ರಕಾರ, ಭತ್ಯೆ ನಿಗದಿ ಮಾಡಲಾಗಿದೆ. 18 ವರ್ಷದವರಿಗೆ 25 ವರ್ಷದೊಳಗಿನರಿಗೆ ₹1,500, 46ರಿಂದ 50 ವರ್ಷದವರೆಗಿನವರಿಗೆ ₹3,800 ಭತ್ಯೆ ನೀಡಲಾಗುತ್ತದೆ. ನೋಂದಣಿ ಆರಂಭವಾಗಿದ್ದು, ತಕ್ಷಣವೇ ಈ ಲಿಂಕ್ ಕ್ಲಿಕ್ ಮಾಡಿ ಹೆಸರು ನೋಂದಾಯಿಸಿ’ – ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಿರುದ್ಯೋಗ ಭತ್ಯೆ ಕುರಿತಂತೆ ಓಡಾಡುತ್ತಿರುವ ಸಂದೇಶ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ಕೇಂದ್ರ ಸರ್ಕಾರವಾಗಲೀ, ಯಾವುದೇ ಸಚಿವಾಲಯವಾಲೀ ಇಂತಹ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅನಗತ್ಯ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ ಮೋಸ ಹೋಗಬೇಡಿ ಎಂದು ಕಿವಿಮಾತು ಹೇಳಿದೆ. ನಿರುದ್ಯೋಗಿಗಳ ದೌರ್ಬಲ್ಯವನ್ನು ದುರ್ಲಾಭಕ್ಕೆ ಬಳಸಿಕೊಳ್ಳುವವರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT