ADVERTISEMENT

Fact Check: ಮದರಸಾವನ್ನಾಗಿ ದೆಹಲಿ ಶಾಲೆ ಪರಿವರ್ತನೆ ಆರೋಪ ಎಷ್ಟು ಸರಿ?

ಫ್ಯಾಕ್ಟ್ ಚೆಕ್
Published 9 ಮೇ 2023, 19:40 IST
Last Updated 9 ಮೇ 2023, 19:40 IST
fact check: ಮದರಸಾವನ್ನಾಗಿ ದೆಹಲಿ ಶಾಲೆ ಪರಿವರ್ತನೆ ಆರೋಪ ಎಷ್ಟು ಸರಿ?
fact check: ಮದರಸಾವನ್ನಾಗಿ ದೆಹಲಿ ಶಾಲೆ ಪರಿವರ್ತನೆ ಆರೋಪ ಎಷ್ಟು ಸರಿ?   

ಸರ್ಕಾರಿ ಶಾಲೆಯೊಂದರಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ಶಾಲೆಯ ಕೋಣೆಯೊಂದರಲ್ಲಿ ಮಹಿಳೆಯರು, ಮಕ್ಕಳು ಕುಳಿತಿರುವ ಹಾಗೂ ಅಡುಗೆ ಮಾಡುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ. ವ್ಯಕ್ತಿಯೊಬ್ಬರು ಮಕ್ಕಳಿಗೆ ಬೋಧಿಸುತ್ತಿರುವುದು ಕಾಣುತ್ತದೆ. ಶಾಲೆಯಲ್ಲಿ ಏನು ಚಟುವಟಿಕೆ ನಡೆಯುತ್ತಿದೆ ಎಂದು ಮತ್ತೊಬ್ಬ ವ್ಯಕ್ತಿ ಪ್ರಶ್ನಿಸುತ್ತಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶಾಲೆಗಳನ್ನು ಮದರಸಾಗಳನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೊ ಕುರಿತು ಬರೆದಿದ್ದಾರೆ. ಆದರೆ ಇದು ತಪ್ಪು ಮಾಹಿತಿ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಎರಡು ವರ್ಷ ಹಳೆಯದು ಹಾಗೂ ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ಸಂಬಂಧಿಸಿದ್ದು ಎಂದು ‘ದಿ ಲಾಜಿಕಲ್ ಇಂಡಿಯನ್’ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಮಿರ್ಜಾಪುರದ ಭಾರತ್‌ ನಗರ ಪ್ರಾಥಮಿಕ ಶಾಲೆಯಲ್ಲಿ ದೀಪಾವಳಿ ಹಬ್ಬದ ದಿನ  ಔತಣಕೂಟ ಏರ್ಪಾಡಿಸಲಾಗಿತ್ತು. ಸಾಮಾಜಿಕ ಕಾರ್ಯಕರ್ತ ಅಶುತೋಷ್ ಗುಪ್ತಾ ಎಂಬವರು ಈ ಬಗ್ಗೆ ವಿಡಿಯೊ ಮಾಡಿ, ಪೊಲೀಸರಿಗೆ ದೂರು ನೀಡಿದ್ದರು. ಆದರೆ ದೆಹಲಿಯ ಶಾಲೆಯನ್ನು ಮದರಸಾವನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ‘ದಿ ಲಾಜಿಕಲ್ ಇಂಡಿಯನ್’ ವರದಿ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT