ADVERTISEMENT

Fact Check: ‘ದುರದೃಷ್ಟವಶಾತ್‌ ನಾನು ಹಿಂದೂ’ ಎಂದು ನೆಹರೂ ಎಲ್ಲಿಯೂ ಹೇಳಿಲ್ಲ

Fact Check

ಫ್ಯಾಕ್ಟ್ ಚೆಕ್
Published 12 ನವೆಂಬರ್ 2023, 18:51 IST
Last Updated 12 ನವೆಂಬರ್ 2023, 18:51 IST
fact check
fact check   

‘ಶೈಕ್ಷಣಿಕವಾಗಿ ನಾನು ಮುಸ್ಲಿಂ, ಸಾಂಸ್ಕೃತಿಕವಾಗಿ ನಾನು ಕ್ರಿಶ್ಚಿಯನ್‌, ದುರಾದೃಷ್ಟವಶಾತ್‌ ನಾನು ಹಿಂದೂ’ ಎಂದೂ ಜವಾಹರಲಾಲ್‌ ನೆಹರೂ ಅವರು ಹೇಳಿದ್ದಾರೆ ಎಂದು ಆರೋಪಿಸುವ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರೊಂದಿಗೆ, ‘ಶೈಕ್ಷಣಿಕವಾಗಿ ನಾನು ಕ್ರಿಶ್ಚಿಯನ್‌, ಸಾಂಸ್ಕೃತಿವಾಗಿ ನಾನು ಮುಸ್ಲಿಂ, ಹುಟ್ಟಿನ ಒಂದೇ ಕಾರಣಕ್ಕೆ ನಾನು ಹಿಂದೂ’ ಎಂದು ನೆಹರೂ ಹೇಳಿದ್ದಾರೆ ಎಂದೂ ಪ್ರಚಾರವಾಗುತ್ತಲೇ ಇದೆ. ‘ನಾನು ಇಂಗ್ಲಿಷ್‌ ಶಿಕ್ಷಣ ಪಡೆದವನು, ನಿಲುವುಗಳಲ್ಲಿ ಅಂತರರಾಷ್ಟ್ರೀಯವಾದಿ, ಸಂಸ್ಕೃತಿಯಲ್ಲಿ ಮುಸಲ್ಮಾನ, ಹುಟ್ಟಿನ ಒಂದೇ ಕಾರಣಕ್ಕೆ ನಾನು ಹಿಂದೂ: ನೆಹರೂ’ ಎಂದು ಬಿಜೆಪಿ ಐಟಿ ಸೆಲ್‌ನ ಅಧ್ಯಕ್ಷ ಅಮಿತ್‌ ಮಾಳವೀಯ ಅವರು 2015ರಲ್ಲಿಯೇ ಟ್ವೀಟ್‌ ಮಾಡಿದ್ದಾರೆ. ‘ನೆಹರೂ ಅವರು ತಮ್ಮ ಆತ್ಮಕಥೆಯಲ್ಲಿ ತಮ್ಮನ್ನು ತಾವು ಈ ರೀತಿ ಚಿತ್ರಿಸಿಕೊಂಡಿದ್ದಾರೆ. ನಾನು ಇಂಗ್ಲಿಷ್‌ ಶಿಕ್ಷಣ ಪಡೆದವನು, ನಿಲುವುಗಳಲ್ಲಿ ಅಂತರರಾಷ್ಟ್ರೀಯವಾದಿ, ಸಂಸ್ಕೃತಿಯಲ್ಲಿ ಮುಸಲ್ಮಾನ, ಹುಟ್ಟಿನ ಒಂದೇ ಕಾರಣಕ್ಕೆ ನಾನು ಹಿಂದೂ’ ಎಂದು ನೆಹರೂ ಅವರೇ ತಮ್ಮ ಬಗ್ಗೆ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ’ ಎಂದು ಹಿಂದೂ ಮಹಾಸಭಾದ ನಾಯಕ ಎನ್‌.ಬಿ. ಖರೆ ಅವರು ‘ದಿ ಆ್ಯಂಗ್ರಿ ಅರಿಸ್ಟೋಕ್ರಾಟ್‌’ 1959ರಲ್ಲಿ ಬರೆದಿರುವ ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದರು. ಆದರೆ, ಇವೆಲ್ಲವೂ ಸುಳ್ಳು ಮಾಹಿತಿ.

ನೆಹರೂ ಅವರ ಆತ್ಮಕಥೆಯಲ್ಲಿ ಎಲ್ಲಿಯೂ ಇಂಥ ಹೇಳಿಕೆ ದಾಖಲಾಗಿಲ್ಲ ಎಂದು ‘ದಿ ಕ್ವಿಂಟ್‌’, ‘ಆಲ್ಟ್‌ ನ್ಯೂಸ್‌’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT