ADVERTISEMENT

fact check: ಬಿಜೆಪಿ ಸೋಲಿಸಲು ಎಸ್‌ಪಿ ಮಾಡಿತೇ ಕುತಂತ್ರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 19:29 IST
Last Updated 7 ಮಾರ್ಚ್ 2022, 19:29 IST
   

‘ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ತಾವು ಸೋಲುತ್ತೇವೆ ಎಂದು ಗೊತ್ತಾದರೆ, ತಮ್ಮ ಮತಗಳೆಲ್ಲವೂ ಬಿಜೆಪಿ ಅಥವಾ ಬೇರೆ ಪಕ್ಷಗಳಿಗೆ ವರ್ಗಾಯಿಸಬೇಕು. ಆ ಮೂಲಕ ಬಿಎಸ್‌ಪಿ ಅಭ್ಯರ್ಥಿಗಳು ಸೋಲುವಂತೆ ನೋಡಿಕೊಳ್ಳಬೇಕು. ಬಿಎಸ್‌ಪಿ ಅಭ್ಯರ್ಥಿಗಳು ಎಲ್ಲಿಯೂ ಆರಿಸಿ ಬರಬಾರದು’ ಎಂಬ ವಿವರ ಇರುವ ಪತ್ರದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮಾಜವಾದಿ ಪಕ್ಷದ ಲೆಟರ್‌ಹೆಡ್‌ನಲ್ಲಿ ಈ ಪತ್ರ ಬರೆಯಲಾಗಿದೆ. ಬಿಎಸ್‌ಪಿಯನ್ನು ಸೋಲಿಸಲು ಎಸ್‌ಪಿ ಹೀಗೆ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗಿದೆ.

ಇದು ಸುಳ್ಳು ಸುದ್ದಿ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ವೈರಲ್ ಆಗಿರುವ ಚಿತ್ರದಲ್ಲಿ ಇರುವ ಲೆಟರ್‌ಹೆಡ್‌ಗೂ, ಸಮಾಜವಾದಿ ಪಕ್ಷದ ಲೆಟರ್‌ಹೆಡ್‌ಗೂ ವ್ಯತ್ಯಾಸವಿದೆ. ವೈರಲ್ ಆಗಿರುವ ಪತ್ರದ ವಿರುದ್ಧ ಸಮಾಜವಾದಿ ಪಕ್ಷವು ಮಾರ್ಚ್‌ 3ರಂದು ಲಖನೌ ಪೊಲೀಸರು ಮತ್ತು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಸಂಬಂಧ ಎಫ್‌ಐಆರ್ ಸಹ ದಾಖಲಾಗಿದೆ. ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿ ಈ ತಂತ್ರ ರೂಪಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT