ADVERTISEMENT

ಪೊಲೀಸರು ಸ್ಕೂಟರ್‌ ಸವಾರರನ್ನು ಬೆನ್ನಟ್ಟಿ ಹಿಡಿಯುವ ದೃಶ್ಯ ಉತ್ತರ ಪ್ರದೇಶದ್ದಲ್ಲ

ಫ್ಯಾಕ್ಟ್ ಚೆಕ್
Published 1 ಏಪ್ರಿಲ್ 2024, 0:03 IST
Last Updated 1 ಏಪ್ರಿಲ್ 2024, 0:03 IST
   

ಸ್ಕೂಟರ್‌ ಒಂದರಲ್ಲಿ ಇಬ್ಬರು ವ್ಯಕ್ತಿಗಳು ಪರಾರಿಯಾಗಲು ಯತ್ನಿಸುತ್ತಿರುವ ಮತ್ತು ಪೊಲೀಸರು ಅವರನ್ನು ಬೈಕ್‌ನಲ್ಲಿ ಬೆನ್ನಟ್ಟುತ್ತಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸ್ಕೂಟರ್‌ನಲ್ಲಿ ಪರಾರಿಯಾಗುತ್ತಿರುವವರಿಗೆ ಗುಂಡು ಹಾರಿಸಿ, ಅವರನ್ನು ಪೊಲೀಸರು ತಡೆದು ನಿಲ್ಲಿಸುವ ದೃಶ್ಯವೂ ಆ ವಿಡಿಯೊವಿನಲ್ಲಿ ಇದೆ. ಈ ವಿಡಿಯೊ ಜತೆಗೆ, ‘ನೋಡಿ. ಇದು ಈಗಿನ ಉತ್ತರ ಪ್ರದೇಶದಲ್ಲಿನ ಪೊಲೀಸರ ಕಾರ್ಯವೈಖರಿ. ಪೊಲೀಸರು ಅಪರಾಧಿಗಳನ್ನು ಬೆನ್ನಟ್ಟಿ ಹಿಡಿಯುತ್ತಿದ್ದಾರೆ. ಪ್ರಬಲ ಸರ್ಕಾರವಿದ್ದರೆ ಇವೆಲ್ಲವೂ ಸಾಧ್ಯ’ ಎಂಬ ಸಂದೇಶ ಹಂಚಿಕೊಳ್ಳಲಾಗುತ್ತಿದೆ. ಆದರೆ ಇದು ಸುಳ್ಳು.

ಈ ವಿಡಿಯೊ ಉತ್ತರ ಪ್ರದೇಶದ್ದಲ್ಲ, ಅಲ್ಲಿರುವ ಪೊಲೀಸರೂ ಉತ್ತರ ಪ್ರದೇಶದವರಲ್ಲ. ಅಸಲಿಗೆ ಆ ವಿಡಿಯೊ ಭಾರತದ್ದೇ ಅಲ್ಲ. ಈ ದೃಶ್ಯಾವಳಿಯು ಇಂಡೊನೇಷ್ಯಾ ಪೊಲೀಸರ ಕಾರ್ಯಾಚರಣೆಯ ಲೈವ್‌ ರೆಕಾರ್ಡಿಂಗ್‌ ವಿಡಿಯೊದ ಭಾಗವಾಗಿದೆ. ಪೊಲೀಸರ ನಾಕಾಬಂದಿಯನ್ನು ಮೀರಿ ಪರಾರಿಯಾಗಲು ಯತ್ನಿಸಿದ ಸ್ಕೂಟರ್‌ ಸವಾರರನ್ನು ಬೆನ್ನಟ್ಟಿ ಹಿಡಿಯುವ ಕಾರ್ಯಾಚರಣೆಗೆ ಸಂಬಂಧಿಸಿದ ವಿಡಿಯೊ ಇದು. ಇದೇ ವಿಡಿಯೊವನ್ನು ಸುಳ್ಳು ಮಾಹಿತಿಯೊಂದಿಗೆ, ಉತ್ತರ ಪ್ರದೇಶದ್ದು ಎಂದು ಹಂಚಿಕೊಳ್ಳಲಾಗುತ್ತಿದೆ ಎಂದು ದಿ ಕ್ವಿಂಟ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT