ADVERTISEMENT

ಫ್ಯಾಕ್ಟ್‌ಚೆಕ್‌: ಯುವಕರ ಗುಂಪಿನ ಮೇಲೆ ಪೊಲೀಸರು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 18:06 IST
Last Updated 14 ಜುಲೈ 2022, 18:06 IST
ಲಾಠಿ ಪ್ರಹಾರ
ಲಾಠಿ ಪ್ರಹಾರ   

ದೇವಸ್ಥಾನವೊಂದರ ಎದುರು ಯುವಕರ ಗುಂಪಿನ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕೋಲ್ಕತ್ತದ ದೇವಸ್ಥಾನವೊಂದರ ಎದುರು ನಡೆದ ಘಟನೆಯವಿಡಿಯೊ ಇದಾಗಿದೆ. ಕಾಂವಡ್‌ ಯಾತ್ರಾರ್ಥಿಗಳ ಮೇಲೆ ಪಶ್ಚಿಮ ಬಂಗಾಳ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂಬ ವಿವರಣೆಯನ್ನು ಈ ವಿಡಿಯೊ ಜೊತೆ ನೀಡಲಾಗಿದೆ. ಯುವಕರು ಹೊಡೆಸಿಕೊಳ್ಳುತ್ತಿರುವ ಮತ್ತು ಮಹಿಳೆಯರು ಪೊಲೀಸರ ಬಳಿ ಕ್ಷಮೆ ಯಾಚಿಸುತ್ತಿರುವುದು ಈ ವಿಡಿಯೊದಲ್ಲಿ ಕಂಡುಬರುತ್ತದೆ.

ವಿಡಿಯೊ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ಇಂಡಿಯಾ ಟುಡೆ’ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ಬಿಜೆಪಿ ಬೆಂಗಾಲ್‌’ ಎಂಬ ಟ್ವಿಟರ್‌ ಖಾತೆಯು ಈ ವಿಡಿಯೊವನ್ನು 2021ರ ಆಗಸ್ಟ್‌ 16ರಂದು ಪೋಸ್ಟ್‌ ಮಾಡಿದೆ. ‘ಕೋಲ್ಕತ್ತದ ಭೂತನಾಥ ದೇವಾಲಯದಲ್ಲಿ ಶಿವಭಕ್ತರ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ’ ಎಂಬ ವಿವರಣೆಯನ್ನು ವಿಡಿಯೊ ಜೊತೆ ನೀಡಿದೆ. ಪಶ್ಚಿಮ ಬಂಗಾಳ ಸರ್ಕಾರವು 2021ರ ಆಗಸ್ಟ್‌ 31ರ ವರೆಗೆ ಕೋವಿಡ್‌ ನಿರ್ಬಂಧ ಹೇರಿತ್ತು. ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಜನರು ದೇವಸ್ಥಾನದ ಬಳಿ ಸೇರಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು ಎಂದು ಇಂಡಿಯಾ ಟುಡೆ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT