ADVERTISEMENT

ಕುರ್ಚಿಯಲ್ಲಿ ಕುಳಿತುಕೊಂಡು ನಾಮಪತ್ರ ಸಲ್ಲಿಸಿದರೇ ರಾಹುಲ್ ಗಾಂಧಿ?

​ಪ್ರಜಾವಾಣಿ ವಾರ್ತೆ
Published 4 ಮೇ 2019, 15:59 IST
Last Updated 4 ಮೇ 2019, 15:59 IST
   

ಬೆಂಗಳೂರು: ಅಮೇಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುತ್ತಿರುವ ಫೋಟೊ ಮತ್ತು ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸುತ್ತಿರುವ ಫೋಟೊವನ್ನು ಹೋಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.

ನಾಮ್‌ದಾರ್vs ಕಾಮ್‌ದಾರ್ ಎಂದು ಈ ಫೋಟೊಗಳಿಗೆ ಶೀರ್ಷಿಕೆ ನೀಡಿದ್ದು, ರಾಹುಲ್ ಗಾಂಧಿ ಕುರ್ಚಿಯಲ್ಲಿ ಕುಳಿತುಕೊಂಡೇ ನಾಮಪತ್ರ ಸಲ್ಲಿಸುತ್ತಿದ್ದಾರೆ. ಆದರೆ ದೇಶದ ಪ್ರಧಾನಿ ನಿಂತುಕೊಂಡು ನಾಮಪತ್ರ ನೀಡುತ್ತಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಹಾಗಾದರೆ ರಾಹುಲ್ ಗಾಂಧಿ ಕುಳಿಕುಕೊಂಡೇ ನಾಮಪತ್ರ ಸಲ್ಲಿಸಿದರೆ? ಈ ಬಗ್ಗೆ ದಿ ಕ್ವಿಂಟ್ ಫ್ಯಾಕ್ಟ್‌ಚೆಕ್ ಮಾಡಿದೆ.

ADVERTISEMENT

ಫ್ಯಾಕ್ಟ್‌ಚೆಕ್
ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುತ್ತಿರುವ ಫೋಟೊವನ್ನು ನೋಡಿದರೆ ಅವರು ಕುಳಿತುಕೊಂಡೇ ನಾಮಪತ್ರ ಸಲ್ಲಿಸುತ್ತಿರುವಂತೆ ಕಾಣುತ್ತದೆ.ಆದರೆ ನಿಜವಾಗಿಯೂ ಅವರು ಕುಳಿತುಕೊಂಡು ನಾಮಪತ್ರ ಸಲ್ಲಿಸಿಲ್ಲ.ಇಲ್ಲಿ ರಿಟರ್ನಿಂಗ್ ಆಫೀಸರ್ ರಾಹುಲ್ ಗಾಂಧಿಗಿಂತ ಹೆಚ್ಚು ಎತ್ತರದಲ್ಲಿ ಕುಳಿತಿರುವ ಕಾರಣ ಈ ಫೋಟೊದಲ್ಲಿ ರಾಹುಲ್ ಕುಳಿತುಕೊಂಡೇ ನಾಮಪತ್ರ ಸಲ್ಲಿಸುತ್ತಿರುವಂತೆ ಕಾಣುತ್ತಿದೆ.

ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ಅಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಜತೆಗಿದ್ದರು.ರಾಜ್ಯಸಭಾ ಟೀವಿಯಲ್ಲಿ ರಾಹುಲ್ ನಾಮಪತ್ರಿಕೆ ಸಲ್ಲಿಸುತ್ತಿರುವ ದೃಶ್ಯ ಪ್ರಸಾರವಾಗಿದೆ.ಈ ವಿಡಿಯೊದಲ್ಲಿ ರಾಹುಲ್ ನಿಂತುಕೊಂಡೇ ನಾಮಪತ್ರ ಸಲ್ಲಿಸುತ್ತಿದ್ದಾರೆ.

ಇತರ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ದೃಶ್ಯಗಳಲ್ಲಿಯೂ ರಾಹುಲ್ ನಿಂತುಕೊಂಡೇ ನಾಮಪತ್ರ ಸಲ್ಲಿಸುತ್ತಿರುವುದು ಕಾಣುತ್ತದೆ.

ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ಫೋಟೊ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಾಮಪತ್ರ ಸಲ್ಲಿಸುವ ಫೋಟೊವನ್ನು ಹೋಲಿಸಿ ಇದೇ ರೀತಿ ರಾಹುಲ್‌ನ್ನು ಟೀಕಿಸಲಾಗಿತ್ತು.

ಈ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.