
rahul gandhi
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾರಿನಿಂದ ಇಳಿದು ಸಂಸತ್ ಭವನದ ಒಳಗೆ ಹೋಗುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ರಾಹುಲ್ ಗಾಂಧಿ ಅವರು ವಕ್ಫ್ (ತಿದ್ದುಪಡಿ) ಮಸೂದೆಯ ಬಗ್ಗೆ ಚರ್ಚೆ ನಡೆಯುವಾಗ ಲೋಕಸಭೆಯ ಕಲಾಪಕ್ಕೆ ಬೆಳಿಗ್ಗೆಯಿಂದ ಗೈರಾಗಿದ್ದರು; ಆದರೆ, ಮಸೂದೆಯ ವಿರುದ್ಧ ಮತ ಚಲಾಯಿಸುವ ಸಲುವಾಗಿ ರಾತ್ರಿ 10 ಗಂಟೆಗೆ ಸಂಸತ್‌ಗೆ ಬಂದರು ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ನಿರ್ದಿಷ್ಟ ಪದವನ್ನು ಹಾಕಿ ಹುಡುಕಾಟ ನಡೆಸಿದಾಗ, ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ, ಐಎಎನ್‌ಎಸ್ ವರದಿಗೆ ಸಂಬಂಧಿಸಿದ್ದು ಎನ್ನುವುದು ತಿಳಿಯಿತು. ಸರ್ಕಾರದ ಒಡೆತನದ ಸಂಸದ್ ಟಿವಿಯ ದೃಶ್ಯಾವಳಿ ಪರೀಕ್ಷಿಸಿದಾಗ, ವಕ್ಫ್ ಮಸೂದೆ ಮೇಲೆ ಚರ್ಚೆ ನಡೆಯುವ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸಾಲಿನಲ್ಲಿ ಇತರೆ ನಾಯಕರ ಜತೆ ರಾಹುಲ್ ಅವರೂ ಕುಳಿತಿರುವುದು ಕಂಡಿತು. ವಕ್ಫ್ ಮಸೂದೆ ಕುರಿತ ಚರ್ಚೆಯ ವೇಳೆ, ಬೆಳಿಗ್ಗೆ ಅವರು ಕಲಾಪದಲ್ಲಿ ಹಾಜರಿದ್ದುದು ಖಚಿತವಾಯಿತು. ರಾಹುಲ್ ಸಂಸತ್‌ಗೆ ಬರುವ ವಿಡಿಯೊ ಹಂಚಿಕೊಂಡು ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.