ADVERTISEMENT

Fact Check: ವೈರಲ್ ಆಗಿರುವ ಶಾರುಕ್ ಖಾನ್ ಟ್ವೀಟ್‌ನಲ್ಲಿ ಏನಿದೆ?

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 15:43 IST
Last Updated 5 ಅಕ್ಟೋಬರ್ 2021, 15:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಮಾದಕವಸ್ತು ಬಳಸಿದ ಆರೋಪದ ಮೇಲೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಶಾರುಕ್ ಖಾನ್ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್‌ ಚರ್ಚೆಯಾಗುತ್ತಿದೆ. ‘ನರೇಂದ್ರ ಮೋದಿ ಅವರು ಪ್ರಧಾನಿಯಾದರೆ, ನಾನು ಟ್ವಿಟರ್‌ ಅಷ್ಟೇ ಅಲ್ಲ, ದೇಶವನ್ನೇ ಬಿಡುತ್ತೇನೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖವಾಗಿದೆ. ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್‌ನಲ್ಲಿ ಹಂಚಿಕೆಯಾಗುತ್ತಿದೆ.

ವೈರಲ್ ಆಗಿರುವ ಟ್ವೀಟ್ ಶಾರುಕ್ ಖಾನ್ ಅವರು ಮಾಡಿದ್ದಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾ‌ಕ್ಟ್‌ಚೆಕ್ ವೇದಿಕೆ ತಿಳಿಸಿದೆ. ಕಮಲ್ ಆರ್‌ ಖಾನ್ ಎಂಬುವರು 2014ರಲ್ಲಿ ಮಾಡಿದ್ದ ಟ್ವೀಟ್‌, ಶಾರುಕ್ ಖಾನ್ ಅವರದ್ದು ಎಂದು ಸುದ್ದಿಯಾಗಿತ್ತು. ಸ್ವತಃ ಶಾರುಕ್ ಅವರು ಟ್ವೀಟ್ ಮಾಡಿ, ತಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ವೈರಲ್ ಆಗಿರುವ ಟ್ವೀಟ್‌ ಅನ್ನು ಶಾರುಕ್ ಅವರದ್ದು ಎಂಬಂತೆ ತಿರುಚಲಾಗಿದೆ ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT