ADVERTISEMENT

Fact Check: ರಾಜಸ್ಥಾನದ ಜೈಪುರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತೇ?

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 20:18 IST
Last Updated 11 ಅಕ್ಟೋಬರ್ 2021, 20:18 IST
ಫ್ಯಾಕ್ಟ್‌ ಚೆಕ್‌
ಫ್ಯಾಕ್ಟ್‌ ಚೆಕ್‌   

ಪೊಲೀಸ್‌ ಸಮವಸ್ತ್ರದಲ್ಲಿರುವವರಿಗೆ ಜನರು ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೊವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ರಾಜಸ್ಥಾನದ ಜೈಪುರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ವಿಡಿಯೊ ಜೈಪುರ ಘಟನೆಗೆ ಸಂಬಂಧಿಸಿದ್ದು ಎಂದು ವಿಡಿಯೊ ಕುರಿತು ಹೇಳಲಾಗುತ್ತಿದೆ. ಕಲ್ಲು ತೂರುತ್ತಿರುವವರು ‘ಅಲ್ಲಾ ಹು ಅಕ್ಬರ್‌’ ಎಂದು ಹೇಳುತ್ತಿರುವುದು ವಿಡಿಯೊದಲ್ಲಿ ಕೇಳುತ್ತದೆ. ಇದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ವ್ಯಕ್ತಿ ‘ರಾಜಸ್ಥಾನವು ಕಾಶ್ಮೀರವಾಗಿ ಬದಲಾಗಿದ್ದನ್ನು ನಾವು ಗಮನಿಸಿರಲಿಲ್ಲ’ ಎಂದು ತಲೆ ಬರಹ ನೀಡಿದ್ದಾರೆ.

ವಿಡಿಯೊದಲ್ಲಿರುವ ಘಟನೆ ಜೈಪುರಕ್ಕೆ ಸಂಬಂಧಿಸಿದ್ದಲ್ಲ ಎಂದು ‘ಆಲ್ಟ್‌ ನ್ಯೂಸ್‌’ ವರದಿ ಮಾಡಿದೆ. ಈ ವಿಡಿಯೊವನ್ನು 2017ರ ಸೆಪ್ಟೆಂಬರ್‌ನಲ್ಲಿ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಲಾಲ್‌ ಚೌಕದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಘಟನೆಗೆ ಸಂಬಂಧಿಸಿದ ವಿಡಿಯೊ ಇದು. ರಿವರ್ಸ್‌ ಇಮೇಜ್ ಸರ್ಚ್ ತಂತ್ರಜ್ಞಾನ ಬಳಸಿ ಈ ವಿಡಿಯೊ ಸೆರೆಯಾಗಿರುವ ಸ್ಥಳ ಪತ್ತೆ ಮಾಡಲಾಗಿದೆ. ಇತ್ತೀಚೆಗೆ ನಡೆದ ಜೈಪುರ ಘಟನೆಗೂ ಈ ವಿಡಿಯೊಗೂ ಯಾವುದೇ ಸಂಬಂಧವಿಲ್ಲ ಎಂದು ಆಲ್ಟ್‌ ನ್ಯೂಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT