ADVERTISEMENT

ಫ್ಯಾಕ್ಟ್‌ಚೆಕ್‌: ರೈತರು ಖಲಿಸ್ತಾನದ ಪರ ಘೋಷಣೆ ಕೂಗಿದ್ದು ನಿಜವೇ?

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 19:21 IST
Last Updated 30 ನವೆಂಬರ್ 2020, 19:21 IST
   

ದೆಹಲಿಯಸಿಂಘುಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಪಾಕಿಸ್ತಾನ ಮತ್ತು ಖಲಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿದ್ದಾರೆ ಎಂಬ ವಿಡಿಯೊ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ರೈತರ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರವಾಗಿ ಮತ್ತು ಖಲಿಸ್ತಾನದ ಪರವಾಗಿ ಘೋಷಣೆ? ಇವರು ನಿಜವಾಗಿಯೂ ರೈತರೇ?' ಎಂದು ಪ್ರೀತಿ ಗಾಂಧಿ ಎಂಬುವವರು ಟ್ವೀಟ್‌ ಮಾಡಿದ್ದಾರೆ. ಕೆಲವರು ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿರುವ ವಿಡಿಯೊವನ್ನೂ ಅವರು ಟ್ವೀಟ್‌ನಲ್ಲಿ ಲಗತ್ತಿಸಿದ್ದಾರೆ. ದೆಹಲಿ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಪುನೀತ್ ಅಗರ್ವಾಲ್ ಸಹ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ. ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಸಹ ಪ್ರತಿಭಟನಾ ನಿರತ ರೈತರನ್ನು 'ಖಲಿಸ್ತಾನಿಗಳು ಮತ್ತು ನಕ್ಸಲರು' ಎಂದು ಕರೆದಿದ್ದಾರೆ. ಈ ವಿಡಿಯೊವನ್ನು 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಈ ಟ್ವೀಟ್‌ನಲ್ಲಿ ಹಳೆಯ ವಿಡಿಯೊವನ್ನು ಲಗತ್ತಿಸಲಾಗಿದೆ. ರೈತರು ಪಾಕಿಸ್ತಾನ ಮತ್ತು ಖಲಿಸ್ತಾನದ ಪರವಾಗಿ ಘೋಷಣೆ ಕೂಗುತ್ತಿದ್ದಾರೆ ಎಂದು ಒಕ್ಕಣೆ ಬರೆಯಲಾಗಿದೆ.ಆದರೆ ಇದು 2019ರಲ್ಲಿ ಬ್ರಿಟನ್‌ನಲ್ಲಿ ಖಲಿಸ್ತಾನ ಪರ ಸಿಖ್ಖರು ನಡೆಸಿದ್ದ ವಿಡಿಯೊ. ಅದನ್ನು ತಪ್ಪಾಗಿ ಇಲ್ಲಿ ಬಳಸಲಾಗಿದೆ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT